ಬೆಂಗಳೂರು: ನನ್ನ ಜೀವನವನ್ನೇ ಆಧರಿಸಿದ ಶಕೀಲಾ ಚಿತ್ರದಲ್ಲಿ ನನ್ನ ಬದುಕಿನ ಚಿತ್ರಣ ಸರಿಯಾಗಿಯೆ ಬಂದಿಲ್ಲ. ಜೀವನದಲ್ಲಿ ನಡೆದ ಪ್ರಮುಖ ಅಂಶಗಳೇ ಚಿತ್ರದಲ್ಲಿ ಇಲ್ಲವೇ ಇಲ್ಲ ಎಂದು ವಯಸ್ಕರ ಸಿನಿಮಾದ ತಾರೆ ಶಕೀಲಾ,ಡೈರೆಕ್ಟರ್ ಇಂದ್ರಜಿತ್ ಮೇಲೆ ಬೇಸರ ಮಾಡಿಕೊಂಡಿದ್ದಾರೆ.
ಮೂರು ವರ್ಷಗಳ ಬಳಿಕ ಕನ್ನಡಕ್ಕೆ ಮತ್ತೆ ಬಂದಿರೋ ಶಕೀಲಾ, ಡವ್ ಮಾಸ್ಟರ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.ಇದೇ ಸಮಯದಲ್ಲಿಯೇ ತಮ್ಮ ಜೀವನಾಧರಿಸಿದ ಶಕೀಲಾ ಸಿನಿಮಾದ ಬಗ್ಗೆನೂ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ.
ಡೈರೆಕ್ಟರ್ ಇಂದ್ರಜಿತ್ ನನ್ನ ಜೀವನದ ನೈಜ ಕಥೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದರು. ಆದರೆ ಅದು ಫ್ಲಾಪ್ ಆಗಿಯೇ ಹೋಯಿತು. ಜನ ಅದನ್ನ ನೋಡಲೇ ಇಲ್ಲ.
ಅದರಲ್ಲೂ ಈ ಚಿತ್ರದಲ್ಲಿ ನನ್ನ ಜೀವನದಲ್ಲಿ ನಡೆದ ಪ್ರಮುಖ ಅಂಶಗಳನ್ನೆಬಿಡಲಾಗಿದೆ. ಅಷ್ಟೇ ಅಲ್ಲ, ನನಗೆ ಇಬ್ಬರು ಅಣ್ಣಂದಿರು ಇದ್ದಾರೆ. ಒಬ್ಬ ತಮ್ಮನೂ ಇದ್ದಾನೆ. ಆದರೆ ಇದನ್ನ ಸಿನಿಮಾದಲ್ಲಿ ತೋರಿಸಲೇ ಇಲ್ಲ. ಯಾಕೆ ಅಂತ ಕೇಳಿದ್ದಕ್ಕೆ ಮನರಂಜನೇ ಗಾಗಿಯೇ ಈ ವಿಷಯ ಬಿಟ್ಟಿದ್ದೇವೆ ಅಂತಲೇ ಡೈರೆಕ್ಟರ್ ಹೇಳಿದರು. ಹೀಗೆ ಹೇಳಿರೋ ಶಕೀಲಾ ತಮ್ಮ ಜೀವನಾಧಾರಿಸಿದ್ದ ಚಿತ್ರದ ಬಗ್ಗೆ ಅಷ್ಟೇನೂ ಖುಷಿಯಾಗಿಯೇ ಹೇಳಿಕೊಳ್ಳಲಿಲ್ಲ ಬಿಡಿ.
PublicNext
26/12/2021 08:04 am