2021ರ ಭುವನ ಸುಂದರಿ ಪಟ್ಟವನ್ನು ಗೆದ್ದ ನಂತರ ಹರ್ನಾಝ್ ಸಂಧು ಸುದ್ದಿಯಲ್ಲಿದ್ದಾರೆ. ಇಸ್ರೇಲ್ ನಲ್ಲಿ ನಡೆದ ಭುವನ ಸುಂದರಿ (Miss Universe 2021) ಸ್ಪರ್ಧೆಯಲ್ಲಿ ಹರ್ನಾಝ್ 38 ಕೋಟಿ ಬೆಲೆ ಬಾಳುವ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಬರೋಬ್ಬರಿ 21 ವರ್ಷಗಳ ನಂತರ ಭುವನ ಸುಂದರಿ ಪಟ್ಟವನ್ನು ಭಾರತಕ್ಕೆ ತಂದ ಕೀರ್ತಿ ಹರ್ನಾಝ್ ಗೆ ಸಲ್ಲುತ್ತದೆ.
ಇತ್ತೀಚೆಗೆ ಸಂದರ್ಶನದಲ್ಲಿ ಹರ್ನಾಜ್ ಸಂಧು ನೀವು ಪವರ್ ಫುಲ್ ಶ್ರೀಮಂತ, ವಯಸ್ಸಾದ ವ್ಯಕ್ತಿಯನ್ನು ಡೇಟ್ ಮಾಡುತ್ತೀರೋ ಅಥವಾ ಕಷ್ಟಪಡುತ್ತಿರುವ ಯುವಕನನ್ನೋ ಎಂದಾಗ ಹರ್ನಾಝ್ ನಾನು ಹೋರಾಟ ಮಾಡುವ, ಸ್ಟ್ರಗಲ್ ಮಾಡುವ ಯುವಕನೊಂದಿಗೆ ಡೇಟ್ ಮಾಡಲು ಬಯಸುತ್ತೇನೆ. ಕಾರಣ ನಾನೇ ಕಷ್ಟ ಪಟ್ಟಿದ್ದೇನೆ. ಮತ್ತು ಕಷ್ಟಪಡುತ್ತೇನೆ. ಒಬ್ಬ ವ್ಯಕ್ತಿಯಾಗಿ, ಹೋರಾಟ ಮಾಡುವುದು ಮುಖ್ಯ ಎಂದು ನಾನು ನಂಬುತ್ತೇನೆ. ಆಗ ಮಾತ್ರ ನಾವು ನಮ್ಮ ಸಾಧನೆಗಳನ್ನು ಗೌರವಿಸಬಹುದು ಎಂದಿದ್ದಾರೆ.
ಪಂಜಾಬ್ ನ ಗುರುದಾಸ್ ಪುರ ಜಿಲ್ಲೆಯ ಕೊಹಾಲಿ ಗ್ರಾಮದಲ್ಲಿ ಜನಿಸಿದ ಹರ್ನಾಜ್ ಕೌರ್ ಸಂಧು ಕೃಷಿ ಪ್ರಧಾನ ಕುಟುಂಬದವರು.
PublicNext
25/12/2021 05:38 pm