ಬೆಂಗಳೂರು: ಕನ್ನಡ ಪರ ಸಂಘಟನೆಗಳು ಡಿಸೆಂಬರ್-31 ರಂದು ಕರ್ನಾಟಕ ಬಂದ್ ಮಾಡುತ್ತಿವೆ. ಈ ದಿನ ಕನ್ನಡ ಸಿನಿಮಾಗಳು ರಿಲೀಸ್ ಗುತ್ತಿವೆ. ಇದರಿಂದ ಎಲ್ಲರಿಗೂ ತೊಂದರೇ ಆಗುತ್ತಿವೆ. ಈ ದಿನ ಬಂದ್ ನಿರ್ಧಾರ ಸರಿಯಲ್ಲ ಅಂತಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ಬಡವ ರಾಸ್ಕಲ್ ಚಿತ್ರ ವೀಕ್ಷಿಸಿದ ಬಳಿಕ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ನಾವು ಸದಾ ಕನ್ನಡ ಪರವಾಗಿಯೇ ಇರುತ್ತವೆ. ಕನ್ನಡ ಹೋರಾಟ ಉತ್ತಮ ರೀತಿಯಲ್ಲಿಯೇ ಆಗಬೇಕು ಅನ್ನೋದೇ ನಮ್ಮ ಉದೇಶ. ಆದರೆ ಡಿಸೆಂಬರ್-31 ರಂದು ಮೂರು ಮೂರು ಸಿನಿಮಾಗಳು ಬರುತ್ತಿವೆ. ಬಂದ್ ಮಾಡಿದರೇ ಮೂರು ಸಿನಿಮಾಗಳಿಗೆ ನಿಜವಾಗ್ಲೂ ಎಫೆಕ್ಟ್ ಆಗುತ್ತದೆ ಅಂತಲೇ ಶಿವರಾಜ್‌ಕುಮಾರ್ ಹೇಳಿದ್ದಾರೆ.
PublicNext
25/12/2021 12:48 pm