ಬೆಂಗಳೂರು: 1983ರಲ್ಲಿ ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಗೆದ್ದ ವೇಳೆ ನಡೆದ ರೋಚಕ ಸಂಗತಿಯೊಂದನ್ನು ಆಧಾರವಾಗಿಸಿ ನಿರ್ಮಿಸಲಾಗಿರುವ ಬಾಲಿವುಡ್ ಚಿತ್ರ '83'ರ ನಾಯಕ ನಟ ನಿನ್ನೆ ರವಿವಾರ ಬೆಂಗಳೂರಿಗೆ ಆಗಮಿಸಿದ್ರು. ಈ ವೇಳೆ ನಡೆದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್, ರಣವೀರ್ ಸಿಂಗ್, ಕಪಿಲ್‌ದೇವ್ ಸೇರಿ ಘಟಾನುಘಟಿ ನಾಯಕರು ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದಮೇಲೆ ಕಿಚ್ಚನ ವೈಯಕ್ತಿಕ ಬಾಡಿಗಾರ್ಡ್ ಕಿರಣ್ ಜೊತೆ ದೀಪಿಕಾ ಪಡುಕೋಣೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. ಅದೂ ಕನ್ನಡದಲ್ಲೇ ನಿಮ್ಮ ಹೆಸರು ಏನು ಎಂದು ಕೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಿಚ್ಚ ಸುದೀಪ್ ಅವರ ಬಾಡಿ ಗಾರ್ಡ್ ಕಿರಣ್ ಅವರಿಗೆ ದೀಪಿಕಾ ಪಡುಕೋಣೆ ಎಂದರೆ ಇಷ್ಟ. ಅದೇ ರೀತಿ ಅವರು ತಮ್ಮ ಕೈ ಮೇಲೆ ಅನೇಕ ಹೆಸರುಗಳ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದನ್ನು ಕಂಡು ರಣವೀರ್ ಸಿಂಗ್ ಅಚ್ಚರಿಪಟ್ಟರು. ಅಲ್ಲದೇ ದೀಪಿಕಾಗೆ ವಿಡಿಯೋ ಕಾಲ್ ಮಾಡಿ ಅವರ ಟ್ಯಾಟೂಗಳನ್ನು ತೋರಿಸಿದರು. ಈ ವೇಳೆ ದೀಪಿಕಾ ಪಡುಕೋಣೆ ಕನ್ನಡದಲ್ಲೇ ಅವರ ಕುಶಲೋಪರಿ ವಿಚಾರಿಸಿದ್ದಾರೆ. ‘ನಮಸ್ತೆ ಮೇಡಂ. ನನ್ನ ಹೆಸರು ಕಿಚ್ಚ ಕಿರಣ್ ಅಂತ ಸುದೀಪ್ ಅವರ ಪರ್ಸೆನಲ್ ಬಾಡಿಗಾರ್ಡ್ ಅಂತ ಕಿರಣ್ ಹೇಳಿದ್ದಾರೆ. ಇದಕ್ಕೆ ದೀಪಿಕಾ ಪಡುಕೋಣೆ ಕನ್ನಡದಲ್ಲೇ ಉತ್ತರಿಸಿದ್ದಾರೆ.
PublicNext
20/12/2021 05:13 pm