ಬೆಂಗಳೂರು : 'ಪುಷ್ಪ' ಸಿನಿಮಾ ಹಲವು ಕಾರಣಕ್ಕೆ ಈಗಾಗಲೇ ಭಾರಿ ನಿರೀಕ್ಷೆ ಗರಿಗೆದರಿಸಿದೆ. ಇಂದು ದೇಶದಾದ್ಯಂತ ಬಿಡುಗಡೆಯೂ ಆಗಲಿದೆ. ಇದರ ಮಧ್ಯೆ ತೆಲುಗು ಸ್ಟಾರ್ ಅಲ್ಲು ಅರ್ಜುನ್ ಅವರ ಚಿತ್ರ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದು, ಟ್ವಿಟರ್ ನಲ್ಲಿ ಬಾಯ್ಕಾಟ್ ಪುಷ್ಪ ಇನ್ ಕರ್ನಾಟಕ ಟ್ರೆಂಡಿಂಗ್ ಆಗಿದೆ.
ಚಿತ್ರದ ವಿತರಕರು ತೆಲುಗು ಆವೃತ್ತಿಯನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿರುವುದು ಹಲವು ಅಭಿಮಾನಿಗಳನ್ನು ಅಸಮಾಧಾನಗೊಳಿಸಿದೆ.
ತೆಲುಗು ಭಾಷೆ ಮತ್ತು ಜನರನ್ನು ವಿರೋಧಿಸಿ ಚಿತ್ರ ಬಹಿಷ್ಕರಿಸುತ್ತಿಲ್ಲಎಂದು ಕರ್ನಾಟಕದಲ್ಲಿರುವ ಅಲ್ಲು ಅರ್ಜುನ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ, ವಾಸ್ತವವಾಗಿ, ವಿತರಕರು ಕನ್ನಡ ಆವೃತ್ತಿಯ ಬದಲಿಗೆ ತೆಲುಗು ಆವೃತ್ತಿಯನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಆಯ್ಕೆ ಮಾಡಿದ್ದರಿಂದ ಅಸಮಾಧಾನಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಪುಷ್ಪ ಕನ್ನಡ ಆವೃತ್ತಿಗೆ 3 ಶೋಗಳು ಮಾತ್ರ ಸಿಕ್ಕಿವೆ. ತೆಲುಗು ಆವೃತ್ತಿಗೆ ಬರೋಬ್ಬರಿ 593, ತಮಿಳು – 10, ಮಲಯಾಳಂ 4 ಶೋಗಳನ್ನು ಪಡೆದುಕೊಂಡಿದೆ. ದೇಶದ ಒಂದು ಭಾಷೆ ಇತರ ಭಾಷೆಗಳಿಗಿಂತ ಕಡಿಮೆ ಪರದೆಯನ್ನು ಪಡೆಯುವುದು ಇತಿಹಾಸದಲ್ಲಿ ಮೊದಲನೆಯದು ಎಂದು ಬುಕ್ ಮೈ ಶೋ ಮೂಲ ಉಲ್ಲೇಖ ಮಾಡಿ, ಟ್ವೀಟ್ ಮಾಡಲಾಗಿದೆ.
PublicNext
17/12/2021 07:46 am