ಮುಂಬೈ: ಬಾಲಿವುಡ್‌ನ ಒಂದು ಕಾಲದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ತಮನ್ನ ಕ್ರಿಕೆಟರ್ ವಿರಾಟ್ ಕೊಹ್ಲಿಗೆ ಹೋಲಿಸಿಕೊಂಡಿದ್ದಾರೆ. ನನಗಿಂತಲೂ ವಿರಾಟ್‌ಗೆ ಅತಿ ಹೆಚ್ಚು ಫಾಲೋವರ್ಸ್ ಇದ್ದಾರೆ ಅಂತಲೂ ಹೇಳಿಕೊಂಡು ಹೆಮ್ಮೆ ಪಟ್ಟಿದ್ದಾರೆ.
ಅಮಿತಾಭ್ ಬಚ್ಚನ್ ವ್ಯಕ್ತಿತ್ವೇ ವಿಶೇಷವಾಗಿಯೇ ಇದೆ. ಅದಕ್ಕೆ ಅಲ್ಲವೇ ಅವರು ಬಿಗ್ ಬಿ ಅನಿಸಿಕೊಳ್ಳುವುದು. ಇಂತಹ ಅಮಿತಾಭ್ ಬಚ್ಚನ್, ಇನ್‌ಸ್ಟಾದಲ್ಲೂ ಆಕ್ಟೀವ್ ಆಗಿದ್ದಾರೆ.
ಇಲ್ಲಿ ಇವರಿಗೆ 29.23 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಆದರೆ ವಿರಾಟ್ ಗೆ 172.38 ಮಿಲಿಯನ್ ಫಾಲೋವರ್ಸ್ ಇರೋದು ವಿಶೇಷ. ಇದನ್ನ ತಿಳಿದುಕೊಂಡಿರೋ ಅಮಿತಾಭ್ ಈ ಬಗ್ಗೆ ಸಾಮಾಜಿಕ ತಾಣದಲ್ಲೂ ಬರೆದುಕೊಂಡು ಖುಷಿಪಟ್ಟಿದ್ದಾರೆ.
PublicNext
11/12/2021 02:18 pm