ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಮನೆತನದ ಶೈಲಿಯಲ್ಲಿ ಕತ್ರಿನಾ - ವಿಕ್ಕಿ ವಿವಾಹ

ಸೆಲೆಬ್ರಿಟಿಗಳ ಮದುವೆ ಎಂದರೆ ಅದ್ದೂರಿತನ ಇರಲೇಬೇಕು. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಹಸೆಮಣೆ ಏರುತ್ತಿದ್ದಾರೆ.

ಸದ್ಯ ಇವರಿಬ್ಬರ ಮದುವೆ ಸಮಾರಂಭಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಇದಕ್ಕೆಲ್ಲ ಕೋಟ್ಯಂತರ ರೂಪಾಯಿ ಮೀಸಲು ಇಡಲಾಗಿದೆ. ವಿಕ್ಕಿ ಕೌಶಲ್ ಹಿಂದು, ಕತ್ರಿನಾ ಕೈಫ್ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು ಎರಡೂ ಧರ್ಮದ ಸಂಪ್ರದಾಯದ ಪ್ರಕಾರ ಮದುವೆ ನಡೆಯಲಿದೆ. ಬಾಲಿವುಡ್ ತಾರಾ ಜೋಡಿಗಳಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಇಬ್ಬರು ವಧು-ವರರಾಗಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಡಿಸೆಂಬರ್ 9ರಂದು ಸ್ಟಾರ್ ಜೋಡಿ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಲಿದೆ.

ಡಿಸೆಂಬರ್ 7 ರಿಂದ ಡಿಸೆಂಬರ್ 10 ರವರೆಗೆ ವಿವಾಹ ಕಾರ್ಯಕ್ರಮಗಳು ನಡೆಯಲಿವೆ. ಸದ್ಯ ತಾರಾ ಜೋಡಿ ರಾಜಸ್ಥಾನದ ಮದುವೆಯ ತಾಣನ್ನು ತಲುಪಿ ವಿವಿಧ ಕಾರ್ಯಕ್ರಮಗಳಲ್ಲಿ ಬ್ಯುಜಿಯಾಗಿದ್ದಾರೆ. ಕತ್ರಿನಾ ಕೈಫ್-ವಿಕ್ಕಿ ಕೌಶಲ್ ವಿವಾಹವು ರಾಜಶಾಹಿ ದಟ್ ಬಾತ್ ಮತ್ತು ಸಿಕ್ಸ್ ಸೆನ್ಸ್ ಬರ್ವಾರಾ ಫೋರ್ಟ್ ಹೋಟೆಲ್ ನಲ್ಲಿ ನಡೆಯಲಿದೆ. ಈ ಮದುವೆ ಸಮಾರಂಭವನ್ನು ಸಂಪೂರ್ಣ ಗೌಪ್ಯವಾಗಿಡಲಾಗಿದೆ. ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ವಿವಾಹವು ಸಂಪೂರ್ಣವಾಗಿ ರಾಜಮನೆತನದ ಶೈಲಿಯಲ್ಲಿ ನಡೆಯಲಿದೆ. ಕತ್ರಿನಾ ಮತ್ತು ವಿಕ್ಕಿ ಕೌಶಲ್ ಮದುವೆ ಆಗುತ್ತಿರುವ ಕೋಟೆ 700 ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿಯೇ ಸ್ಟಾರ್ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ.ಈ ಕೋಟೆಯು ನೋಡಲು ತುಂಬಾ ಸುಂದರವಾಗಿದ್ದು, ಪ್ರವಾಸಿಗರನ್ನು ಸೆಳೆಯುತ್ತದೆ. ರಾಜಮನೆತನದ ಶೈಲಿಯಲ್ಲಿ ನಡೆಯುತ್ತಿರುವ ವಿವಾಹಕ್ಕೆ ದೊಡ್ಡ ಮಟ್ಟದ ಭದ್ರತಾ ವ್ಯವಸ್ಥೆಯನ್ನೂ ಮಾಡಲಾಗಿದೆ.

Edited By : Nirmala Aralikatti
PublicNext

PublicNext

08/12/2021 10:30 am

Cinque Terre

57.96 K

Cinque Terre

3