ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪು ಕನಸಿನ “ಗಂಧದ ಗುಡಿ” ಟೀಸರ್ ಬಿಡುಗಡೆ

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕನಸಿನ ಯೋಜನೆ ‘ಗಂಧದಗುಡಿ’ ಟೀಸರ್ ಇಂದು ಬಿಡುಗಡೆಯಾಗಿದೆ.

ಅಪ್ಪು ಅಗಲಿಕೆಯ ನಡುವೆಯೇ PRK Audio ಯೂಟ್ಯೂಬ್ ಚಾನೆಲ್ನಲ್ಲಿ ‘ಗಂಧದಗುಡಿ’ ಟೀಸರ್ ಬಿಡುಗಡೆಯಾಗಿದ್ದು, ಪುನೀತ್ ಅವರು ಕರ್ನಾಟಕದ ಅರಣ್ಯ ಸಂಪತ್ತು ಹಾಗೂ ವನ್ಯಜೀವಿ ಜಗತ್ತಿನ ಬಗ್ಗೆ ಅದ್ಭುತ ಲೋಕವನ್ನು ತೆರೆದಿಟ್ಟಿದ್ದಾರೆ.

ಸದ್ಯ ಬಿಡುಗಡೆಯಾದ ಟೀಸರ್ ಸಾಕಷ್ಟು ಕುತೂಹಲ ಕೆರಳಿಸಿದೆ. ‘ದಿ ವೈಲ್ಡ್ ಕರ್ನಾಟಕ’ ನಿರ್ದೇಶಿಸಿದ್ದ ಅಮೋಘವರ್ಷ ಅವರು ‘ಗಂಧದಗುಡಿ’ ನಿರ್ದೇಶಿಸಿದ್ದು, ಪಿಆರ್ ಕೆ ಪ್ರೊಡಕ್ಷನ್ ಅಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಮಡ್ ಸ್ಕಿಪ್ಪರ್ ಸಂಸ್ಥೆಯವರು ನಿರ್ಮಾಣ ಮಾಡಿದ್ದಾರೆ.

‘ಗಂಧದಗುಡಿ’ ಚಿತ್ರೀಕರಣ ಸಂಪೂರ್ಣ ಮುಗಿಸಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇದೆ ಎಂದು ಚಿತ್ರತಂಡ ಹೇಳಿದೆ. 2022 ರಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

Edited By : Nirmala Aralikatti
PublicNext

PublicNext

06/12/2021 10:55 am

Cinque Terre

58.44 K

Cinque Terre

4