ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್ ಒಂದರಲ್ಲಿ ಫಿಲ್ಮ್ ಫೇರ್ 2019-2021 ಇವೆಂಟ್‌ನ ಸುದ್ದಿಗೋಷ್ಠಿ ಇಂದು ನಡೆಯಿತು. ಈ ವೇಳೆ ಅತಿಥಿಯಾಗಿ ನಟಿ ಪ್ರಿಯಾಂಕ ಉಪೇಂದ್ರ ಭಾಗಿಯಾಗಿದ್ದರು. ಇದೇ ವೇಳೆ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಜತೆ ಮಾತನಾಡಿದ ಅವರು, ಉಪ್ಪಿ ಜತೆ ಮತ್ತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುವ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮೊದಲ ಬಾರಿಗೆ ಫಿಲ್ಮ್ ಫೇರ್ ಅವಾರ್ಡ್ ಇವೆಂಟ್ ನಡೆಯುತ್ತಿದ್ದು, ಯಾವ ರೀತಿಯ ಜ್ಯುವೆಲರಿ ಹಾಗೂ ಕಾಸ್ಟ್ಯೂಮ್ ಹಾಕಿಕೊಳ್ಳಬೇಕು ಅಂತ ಫುಲ್ ರೆಡಿಯಾಗುತ್ತಿರುವ ಕುರಿತು ಪ್ರಿಯಾಂಕ ಉಪೇಂದ್ರ ಮಾತನಾಡಿದ್ದಾರೆ.
PublicNext
04/12/2021 10:55 pm