ಬೆಂಗಳೂರು: ಚಂದನವನದ ಚೆಂದ ಸುಂದರಿ ನಟಿ ಸುಧಾರಾಣಿಗೆ ಗೌರವ ಡಾಕ್ಟರೇಟ್ ಒಲಿದಿದೆ. ಈ ಖುಷಿಯ ವಿಚಾರವನ್ನು ಸುಧಾರಾಣಿ ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ನಿಮ್ಮೆಲ್ಲರೊಂದಿಗೆ ಸಂತೋಷದ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್‌ನಿಂದ ನನಗೆ ಕಲಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿದೆ ಎಂದು ಬರೆದಿರುವ ನಟಿ ಸುಧಾರಾಣಿ ಡಾಕ್ಟರೇಟ್ ಸ್ವೀಕರಿಸುತ್ತಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕೇವಲ 12ನೇ ವಯಸ್ಸಿನಲ್ಲಿ ಶಿವರಾಜ್‌ಕುಮಾರ್ ಅವರೊಂದಿಗೆ 'ಆನಂದ್' ಸಿನಿಮಾದಲ್ಲಿ ನಾಯಕಿ ನಟಿಯಾಗಿ ಚಿತ್ರರಂಗಕ್ಕೆ ಬಂದ ಸುಧಾರಾಣಿ 35 ವರ್ಷಗಳ ಸಿನಿ ಜರ್ನಿ ಮುಗಿಸಿದ್ದಾರೆ. ಆದರೂ ಈಗಲೂ ಅವರು ಬೇಡಿಕೆಯ ನಟಿಯಾಗಿ ಉಳಿದಿದ್ದಾರೆ.
PublicNext
02/12/2021 08:26 am