ಮುಂಬೈ: 'ಪ್ಲೀಸ್ ಥಿಯೇಟರ್‌ನಲ್ಲಿ ಪಟಾಕಿ ಸಿಡಿಸಬೇಡಿ' ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಸಲ್ಲು ಅಭಿನಯದ 'ಅಂತಿಮ್: ದಿ ಫೈನಲ್ ಟ್ರುಥ್' ಸಿನಿಮಾ ಶುಕ್ರವಾರ ತೆರೆಕಂಡಿದೆ. ಈ ವೇಳೆ ಸಿನಿಮಾ ನೋಡಲು ಬಂದ ಅಭಿಮಾನಿಗಳು ಸಲ್ಮಾನ್ ಖಾನ್ ಸ್ಕ್ರೀನ್ ಮೇಲೆ ಎಂಟ್ರಿ ಆಗುತ್ತಿದ್ದಂತೆಯೇ ಥಿಯೇಟರ್ ಒಳಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ವಿಡಿಯೋ ನೋಡಿದ ನಟ ಸಲ್ಮಾನ್ ಖಾನ್ ದಯವಿಟ್ಟು ಥಿಯೇಟರ್ ಒಳಗೆ ಪಟಾಕಿ ಸಿಡಿಸಬೇಡಿ. ಇದರಿಂದ ಭಾರಿ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆಗಳಿರುತ್ತವೆ. ಎಲ್ಲರೂ ಸಿನಿಮಾ ನೋಡಿ ಆನಂದಿಸಲು ಚಿತ್ರಮಂದಿರಕ್ಕೆ ಬಂದಿರುತ್ತಾರೆ. ಈ ರೀತಿ ಮಾಡುವುದರಿಂದ ಇತರ ಪ್ರೇಕ್ಷಕರಿಗೆ ತೊಂದರೆಯಾಗುತ್ತದೆ. ಇನ್ನು ಥಿಯೇಟರ್ ಸಿಬ್ಬಂದಿಗಳು ಈ ಬಗ್ಗೆ ಜಾಗೃತರಾಗಿರಬೇಕು. ಅನುಮಾನ ಬಂದಾಗ ಪ್ರೇಕ್ಷಕರನ್ನು ತಪಾಸಣೆ ನಡಸಿ ಒಳ ಪ್ರವೇಶಿಸಲು ಅನುಮತಿಸಬೇಕು ಎಂದು ಸಲ್ಲುಭಾಯ್ ಹೇಳಿದ್ದಾರೆ.
PublicNext
28/11/2021 05:30 pm