ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪು ಅವರು ಭೇಟಿಯಾದಾಗಲೆಲ್ಲ ಒಂದು ಎನರ್ಜಿ ಇರ್ತಿತ್ತು: ನಟ ಗಣೇಶ್

ಬೆಂಗಳೂರು: ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಸಖತ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಬಹುತೇಕರು ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಕೆಲವವು ಭಾವುಕರಾಗಿದ್ದರು.

ಚಿತ್ರರಂಗದ ಎಲ್ಲರೊಟ್ಟಿಗೆ ಆತ್ಮೀಯ ಬಂಧ ಹೊಂದಿದ್ದ ಪುನೀತ್ ರಾಜ್‌ಕುಮಾರ್‌ಗೆ ನಟ ಗಣೇಶ್ ಜೊತೆಗೂ ಬಹಳ ಒಳ್ಳೆಯ ಗೆಳೆತನ ಇತ್ತು. ಪುನೀತ್ ಅಗಲಿದಾಗಲೂ ಗಣೇಶ್ ತೀವ್ರ ಆಘಾತಕ್ಕೆ ಒಳಗಾಗಿದ್ದರು.

ಈ ವೇಳೆ ಮಾತನಾಡಿದ ನಟ ಗಣೇಶ್, ''ಪುನೀತ್ ರಾಜ್‌ಕುಮಾರ್ ನನ್ನ ಸಹೋದರ ಸಮಾನರಾಗಿದ್ದರು. ನನ್ನ ಸ್ನೇಹಿತರು ಹಿತೈಷಿಗಳಾಗಿದ್ದರು. ನನ್ನ ಮನಸ್ಸಿನಾಳದಿಂದ ಅಪ್ಪು ಸರ್ ಅವರ ಕುಟುಂಬ ಸದಸ್ಯರಿಗೆ ಈ ದುಃಖ ನೀಗಿಸಿಕೊಳ್ಳುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಪುನೀತ್ ಅವರು ಸಿಕ್ಕಾಗೆಲ್ಲ ಒಂದು ಎನರ್ಜಿ ಇರ್ತಿತ್ತು. ಅಪ್ಪು ಅಗಲಿ ಇಷ್ಟು ದಿನ ಆದಮೇಲೂ ಅವರ ಬಗ್ಗೆ ನಾವು ಇಷ್ಟೆಲ್ಲ ಮಾತನಾಡುತ್ತಿದ್ದೀವೆಂದರೆ ಅವರು ನಮ್ಮ ಮನಸ್ಸಿನಲ್ಲಿ ಇದ್ದಾರೆಂದು ಅರ್ಥ'' ಎಂದಿದ್ದಾರೆ.

Edited By : Nagaraj Tulugeri
PublicNext

PublicNext

23/11/2021 10:58 pm

Cinque Terre

33.77 K

Cinque Terre

4