ಮುಂಬೈ:ಪಾಕಿಸ್ತಾನದ ಬಾಲಕಿಯರ ಶಿಕ್ಷಣಕ್ಕಾಗಿಯೇ ಹೋರಾಡಿದ ಮಾಲಾಲಾ ಯುಸುಫ್‌ಜಾಯ್ ಮದುವೆ ಬಗ್ಗೆ ನಟಿ ಟ್ವಿಂಕಲ್ ಖನ್ನಾ ಪರೋಕ್ಷವಾಗಿಯೇ ಟಾಂಗ್ ಕೊಟ್ಟಿದ್ದಾರೆ. ಮದುವೇನೆ ಆಗೋದಿಲ್ಲ ಅಂತ ಹೇಳಿದ ಮಲಾಲಾ ಮನಸ್ಸು ಬದಲಿಸಿ ಮದುವೆ ಆಗಿದ್ದಾರೆ.ಅದನ್ನ ವಂಚನೆ ಅಂತ ಕರೀತಾರೆ ಅಲ್ವೇ ಅಂತ ಕೇಳಿದ್ದಾರೆ.
24 ರ ಹರೆದಯ ಮಲಾಲಾ ಇತ್ತೀಚಿಗೆ ಬರ್ಮಿಂಗ್‍ಹ್ಯಾಮ್ ಅಸರ್ ಅನ್ನೋರ ಜೊತೆಗೆ ಮದುವೆ ಆದರು. ಈ ವಿಷಯ ತಿಳಿದಿದ್ದೆ ತಡ. ನೆಟ್ಟಿಗರು ಸಿಕ್ಕಾಪಟ್ಟೆ ಕಾಮೆಂಟ್ ಕೂಡ ಹಾಕಿದರು. ಮದುವೇನೆ ಆಗೋದಿಲ್ಲ ಅಂತ ಹೇಳಿ ಮದುವೆ ಆಗಿದ್ದಾಳೆ ಮಲಾಲಾ ಅಂತಲೂ ಟೀಕಿಸಿದರು.
ಈ ಟೀಕೆಗಳ ಆಧಾರದ ಮೇಲೆನೆ ನಟಿ ಟ್ವಿಂಕಲ್ ಖನ್ನಾ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.ಮಾಲಾಲಾ ಮನಸ್ಸು ಬದಲಿಸಿ ಮದುವೆ ಆಗಿದ್ದಾರೆ. ಕಾಲ ಕ್ರಮಿಸಿದಂತೆ ವಯಸ್ಸು ಆಗುತ್ತದೆ. ವಯಸ್ಸಿಗೆ ತಕ್ಕನಾಗಿ ಜಾಣತನದಿಂದ ಮದುವೆ ಆಗೋ ನಿರ್ಧಾರವನ್ನೂ ತೆಗೆದುಕೊಂಡಿದ್ದಾರೆ. ಆದರೆ ಹೀಗೆ ಹೇಳೋದೊಂದು ಮಾಡೋದು ಇನ್ನೊಂದು ಮಾಡಿದರೆ ಅದನ್ನ ವಂಚನೆ ಅನ್ನಲ್ಲವೇ ಅಂತಲೂ ಕೇಳಿದ್ದಾರೆ ಟ್ವಿಂಕಲ್ ಖನ್ನಾ.
PublicNext
23/11/2021 05:44 pm