ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಗ್ಗೇಶ್ ಅಭಿಮಾನಿ ಮನೆಗೆ 'ಪುನೀತ್ ನಿಲಯ' ಅಂತ ನಾಮಕರಣ

ಕೊರಟಗೆರೆ: ನವರಸ ನಾಯಕ ಜಗ್ಗೇಶ್ ಅಭಿಮಾನಿಗಳ ಸಂಘ ಒಂದು ವಿಶೇಷ ಕೆಲಸ ಮಾಡಿದೆ. ಆ ಕೆಲಸದಲ್ಲಿ ಕನ್ನಡ ಪ್ರೇಮ ಎದ್ದು ಕಾಣುತ್ತದೆ. ಅಷ್ಟೇ ಯಾಕೆ ಜಗ್ಗೇಶ್ ಮತ್ತು ಪುನೀತ್ ಅವರ ಚಿತ್ರಗಳನ್ನ ಇಲ್ಲಿ ಕಾಣಬಹುದು.ಬನ್ನಿ, ನೋಡೋಣ.

ಜಗ್ಗೇಶ್ ಅಭಿಮಾನಿಗಳ ಸಂಘ ಕೊರಟಗೆರೆಯಲ್ಲಿ 66 ನೇ ಕನ್ನಡ ರಾಜ್ಯೋತ್ಸವ ಆಚರಿಸಿದೆ. ಇದರ ಅಂಗವಾಗಿಯೇ ಅಭಿಮಾನಿಯೊಬ್ಬರು ತಮ್ಮ ಮನೆಗೆ ಕನ್ನಡ ಬಾವುಟದ ಬಣ್ಣವನ್ನೆ ಹಚ್ಚಿಸಿದ್ದಾರೆ.

ಕನ್ನಡ ಮಾತೆಯ ಚಿತ್ರವೂ ಗೋಡೆ ಮೇಲಿದೆ. ಇದಕ್ಕೂ ಹೆಚ್ಚಾಗಿ,ಒಂದು ಕಡೆ ಜಗ್ಗೇಶ್ ಮತ್ತೊಂದು ಕಡೆಗೆ ಪುನೀತ್ ಚಿತ್ರಗಳೂ ಇವೆ. ಇದರ ಜೊತೆಗೆ ಅಜ್ಜಿಯ ಈ ಕನಸಿನ ಸೂರಿಗೆ ಪುನೀತ್ ನಿಲಯ ಅಂತಲೂ ಹೆಸರಿಡಲಾಗಿದೆ. ಅಭಿಮಾನಿಗಳ ಈ ವಿಶೇಷ ಕೆಲಸದ ಫೋಟೋವನ್ನ ಸ್ವತಃ ಜಗ್ಗೇಶ್ ತಮ್ಮ ಟ್ವಿಟರ್ ಪೇಜ್ ನಲ್ಲೂ ಹಂಚಿಕೊಂಡು ಹೆಮ್ಮೆಪಟ್ಟಿದ್ದಾರೆ.

Edited By :
PublicNext

PublicNext

20/11/2021 07:22 pm

Cinque Terre

28.99 K

Cinque Terre

0

ಸಂಬಂಧಿತ ಸುದ್ದಿ