ಮುಂಬೈ:ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಪತಿ ಆಯುಷ್ ಶರ್ಮಾ ಈಗೊಂದು ಹೇಳಿಕೆ ಕೊಟ್ಟಿದ್ದಾರೆ.
ಇದು ವಿವಾದಕ್ಕೆ ತಿರುಗೋದಿಲ್ಲ ಅಷ್ಟೆ. ಆದರೆ ಇದು ಸತ್ಯವಾದ ಮಾತು.ಈಗಾಗಲೇ ಆಯುಷ್ ಅದನ್ನ ಮಾಧ್ಯಮಕ್ಕೂ ಹೇಳಿ ಬಿಟ್ಟಿದ್ದಾರೆ. ಬನ್ನಿ, ಹೇಳ್ತೀವಿ.
ಸಲ್ಮಾನ್ ಖಾನ್ ಜೊತೆಗೆ ನಾನು ನಟಿಸೋದಿಲ್ಲ. ಯಾಕೆಂದ್ರೆ, ನನ್ನ ಮತ್ತು ಅವರ ನಡುವೆ ಒಂದ್ ಒಳ್ಳೆ ಸಂಬಂಧ ಇದೆ. ಅವರನ್ನ ನಾನು ಎಂದು ಹೊಡೆಯೋದಿಲ್ಲ. ಅದು ಆಫ್ ಸ್ಕ್ರೀನ್ ಆದರೂ ಸರಿಯೇ. ಆನ್ ಸ್ಕ್ರೀನ್ ಆದರೂ ಸರಿಯೇ. ಅದಕ್ಕೆ ನಾನು ಅಂತಿಮ್ ಚಿತ್ರ ಮಾಡಲು ಒಪ್ಪಿರಲಿಲ್ಲ ಅಂತಲೇ ಆಯುಷ್ ಶರ್ಮಾ ಈಗ ಹೇಳಿಕೊಂಡಿದ್ದಾರೆ.
ಕೊನೆಗೆ ವೃತ್ತಿ ಜೀವನದಲ್ಲಿ ಇದೆಲ್ಲ ಕಾಮನ್ ಅಂತ ಕನ್ವೆನ್ಸ್ ಆದ್ಮೇಲೆನೇ ನಾನು ಈ ಚಿತ್ರವನ್ನ ಒಪ್ಪಿಕೊಂಡಿದ್ದೇನೆ ಅಂತಲೂ ಹೇಳಿದ್ದಾರೆ.ಮಹೇಶ್ ಮಂಜ್ರೆಕರ್ ನಿರ್ದೇಶನದ ಈ ಚಿತ್ರ ಇದೇ ನವೆಂಬರ್-26 ರಂದು ರಿಲೀಸ್ ಆಗುತ್ತಿದೆ.
PublicNext
19/11/2021 06:37 pm