ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುನೀತ್ ದಾರಿಯಲ್ಲಿಯೇ ಸಾಗುವೇ ಎಂದ ತಮಿಳು ನಟ ವಿಶಾಲ್

ಬೆಂಗಳೂರು:ಕಾಲಿವುಡ್ ನಾಯಕ ನಟ ವಿಶಾಲ್,ಪುನೀತ್ ಹಾದಿಯಲ್ಲಿಯೇ ಸಾಗಲು ಸಜ್ಜಾಗಿದ್ದಾರೆ. ಪುನೀತ್ ನೋಡಿಕೊಳ್ಳುತ್ತಿದ್ದ 1,800 ವಿದ್ಯಾರ್ಥಿಗಳನ್ನ ನೋಡಿಕೊಳ್ಳುವ ಜವಾಬ್ದಾರಿ ಹೊರಲು ಸಜ್ಜಾಗಿದ್ದಾರೆ.ಅದೇ ವಿಷಯವನ್ನೇ ಮತ್ತೆ ಇವತ್ತು ಪುನೀತ್ ಸಮಾಧಿ ಮುಂದೇನೆ ಮಾತನಾಡಿದ್ದಾರೆ ವಿಶಾಲ್.

ಹೌದು ಇಂದು ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿಕೊಟ್ಟ ನಟ ವಿಶಾಲ್ ಕೆಲ ಕ್ಷಣ ಭಾವುಕರಾದರು. ಪುನೀತ್ ಅಗಲಿಕೆ ಸಮಾಜಕ್ಕೂ ಫಿಲ್ಮಂ ಇಂಡಸ್ಟ್ರೀಗೂ ಲಾಸ್ ಅಂತಲೇ ಹೇಳಿದರು. ಪುನೀತ್ ನನ್ನ ಒಳ್ಳೆಯ ಗೆಳೆಯ, ಅವರಿಲ್ಲ ಅನ್ನೋದೇ ಜೀರ್ಣಿಸಿಕೊಳ್ಳಲು ಆಗ್ತಿಲ್ಲ ಅಂತಲೇ ಬೇಸರ ವ್ಯಕ್ತಪಡಿಸಿದರು.

ಪುನೀತ್ ಸಾಕಷ್ಟು ಸಮಾಜ ಮುಖಿ ಕೆಲಸಗಳನ್ನ ಮಾಡಿದ್ದಾರೆ. ಅದರಲ್ಲಿ 1,800 ವಿದ್ಯಾರ್ಥಿಗಳನ್ನ ನೋಡಿಕೊಳ್ಳುವುದು ಕೂಡ ಒಂದಾಗಿದೆ. ಅವರನ್ನ ನಾನು ನೋಡಿಕೊಳ್ಳಲು ಸಜ್ಜಾಗಿದ್ದೇನೆ. ಅಶ್ವಿನಿ ಮೇಡಂ ಅವರ ಪರವಾನಗಿಗಾಗಿಯೇ ಕಾಯುತ್ತಿದ್ದೇನೆ. ಇನ್ನೇನು ಕೆಲವೇ ದಿನಗಳಲ್ಲಿ ಅದು ಕೂಡ ಫೈನಲ್ ಆಗುತ್ತದೆ ಎಂದು ವಿಶಾಲ್ ಹೇಳಿದ್ದಾರೆ.

Edited By :
PublicNext

PublicNext

17/11/2021 03:31 pm

Cinque Terre

32.83 K

Cinque Terre

2