ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನನ್ನು ಕಳಿಸಿಕೊಟ್ಟು ಅಪ್ಪುನನ್ನು ವಾಪಸ್ ಕರೆಸಿಕೊಳ್ಳಿ ಪ್ಲೀಸ್ : ನೋವಿನಲ್ಲಿ ಕಣ್ಣೀರಿಟ್ಟ ರಾಘಣ್ಣ

ಬೆಂಗಳೂರು : ಇಂದು ನಗರದ ಅರಮನೆ ಮೈದಾನದಲ್ಲಿ ನಮ್ಮನ್ನು ಅಗಲಿದ ಅಪ್ಪುಗಾಗಿ “ಪುನೀತ್ ನುಡಿನಮನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಚಿತ್ರರಂಗ ಮತ್ತು ರಾಜಕೀಯ ರಂಗದ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಬಳಿಕ ಅಪ್ಪುಗಾಗಿ ಗೀತ ನಮನ ಕೂಡಾ ನಡೆಯಿತು. ಕಾರ್ಯಕ್ರಮದಲ್ಲಿ ಅಗಲಿದ ತಮ್ಮನನ್ನು ನೆನೆದು ರಾಘವೇಂದ್ರ ರಾಜ್ ಕುಮಾರ್ ಕಣ್ಣೀರು ಹಾಕಿದ್ದಾರೆ. ನೆರೆದಿದ್ದ ಜನ ಸಮುದಾಯಕ್ಕೆ ನನ್ನನ್ನು ಕಳುಹಿಸಿ ತನ್ನ ತಮ್ಮನನ್ನು ಕರೆದುಕೊಂಡು ಬನ್ನಿ ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

‘ಅಪ್ಪು ನಿಧನರಾದ ಬಳಿಕ ನಾನು ಮೊದಲು ಶಿವಣ್ಣನ ಮುಖ ನೋಡಿದಾಗ ನಾಚಿಕೆ ಆಯ್ತು. ನಾವು ಇವನನ್ನು ಕಳಿಸಿಕೊಡಬೇಕಾ ಎಂಬ ಪ್ರಶ್ನೆ ಮೂಡಿತು. ಕನ್ನಡಿ ನೋಡಿದಾಗ ಮುಖ ನೋಡಿಕೊಳ್ಳೋಕೆ ನಾಚಿಕೆ ಆಗುತ್ತೆ. ಅವನ ಕೈಯಿಂದ ಪೇಸ್ ಮೇಕರ್ ಹಾಕಿಸಿಕೊಂಡು, ಅವನನ್ನು ಕಳಿಸಿ ನೀನು ಬದುಕಬೇಕಾ ಅಂತ ಪ್ರಶ್ನೆ ಮೂಡುತ್ತೆ. ಬದುಕೋಕೆ ನಾಚಿಕೆ ಆಗತ್ತೆ. ನನ್ನ ಆಯಸ್ಸು ನಿನಗೆ ಕೊಡುತ್ತೇನೆ ಅಂತ ನಾನು ಅವನಿಗೆ ಹೇಳಿದ್ದೆ. ಆದರೆ ಅವನು ತನ್ನ ಆಯಸ್ಸು ನನಗೆ ಕೊಟ್ಟು ಹೋದ’ ಎಂದು ರಾಘವೇಂದ್ರ ರಾಜ್ ಕುಮಾರ್ ಕಣ್ಣೀರು ಹಾಕಿದ್ದಾರೆ.

ಪುನೀತ್ ಅಪ್ರತಿಮ ಪ್ರತಿಭೆ ನಿಜಕ್ಕೂ ನಾಡು ಅವರನ್ನು ಕಳೆದುಕೊಂಡು ತಬ್ಬಲಿಯಾಗಿದೆ.

Edited By : Nirmala Aralikatti
PublicNext

PublicNext

16/11/2021 09:10 pm

Cinque Terre

106.6 K

Cinque Terre

9