ಬೆಂಗಳೂರು:ಬಾಲಿವುಡ್ ನಟಿ ಕಂಗನಾ ರಣಾವತ್ ಸ್ವಾತಂತ್ರ್ಯದ ಕುರಿತು ನೀಡಿದ್ದ ವಿವಾದಿತ ಹೇಳಿಕೆಯನ್ನು ಗಾಂಧಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯು ಖಂಡಿಸಿ ಇವತ್ತು ಕಂಗನಾ ವಿರುದ್ಧ ದೂರು ಕೊಟ್ಟಿದೆ.
ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಗಾಂಧಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯು ದೂರು ಸಲ್ಲಿಸಿದೆ.
ನಟಿ ಕಂಗನಾ ರಣಾವತ್ ನೀಡಲಾದ ಪದ್ಮಶ್ರೀ ಪ್ರಶಸ್ತಿ ವಾಪಸ್ ಪಡೆಯಬೇಕೆಂದು ದೂರುದಾರರು ಒತ್ತಾಯ ಮಾಡಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕಂಗನಾ ರಣಾವತ್ 1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ. ಅದು ಭಿಕ್ಷೆ. ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ’’ ಎಂದು ಹೇಳಿದ್ದರು. ಕಂಗನಾ ರಣಾವತ್ ಅವರ ಈ ಮಾತು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.
PublicNext
13/11/2021 06:36 pm