ಬೆಂಗಳೂರು: ಟಾಲಿವುಡ್ ಹಾಗೂ ಬಾಲಿವುಡ್‌ನಲ್ಲಿ ಬಹುಬೇಡಿಕೆ ನಟಿಯಾಗಿ ರಾಕುಲ್ ಪ್ರೀತ್ ಸಿಂಗ್ ಅವರು ಬೆಳೆಯುತ್ತಿದ್ದಾರೆ. ಇದೀಗ ತಮ್ಮ 'ಛತ್ರಿವಾಲಿ' ಎಂಬ ಹೊಸ ಸಿನಿಮಾ ಘೋಷಣೆ ಮಾಡಿರುವ ರಾಕುಲ್, ಆ ಸಿನಿಮಾದ ಮೊದಲ ನೋಟವನ್ನು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಛತ್ರಿವಾಲಿಯಲ್ಲಿ ರಾಕುಲ್ ಪ್ರೀತ್ ಸಿಂಗ್ ಪಾತ್ರ ಕಂಡು ಬಹುತೇಕರು ಅವಕ್ಕಾಗಿದ್ದಾರೆ. ಈ ಚಿತ್ರದಲ್ಲಿ ರಾಕುಲ್ ಕಾಂಡೋಮ್ ಹಿಡಿದು ಬಂದಿದ್ದಾರೆ. ಅಂದರೆ ಕಾಂಡೋಮ್ ಪರೀಕ್ಷೆ ಮಾಡುವ ಒಬ್ಬ ಮಾರಾಟ ಪ್ರತಿನಿಧಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಇದು ಸಖತ್ ವೈರಲ್ ಆಗುತ್ತಿದೆ. ತಮ್ಮ ಈ ಪಾತ್ರದ ಬಗ್ಗೆ 'ನಾನು ಕಾತರಕ್ಕೆ ಒಳಗಾಗಿದ್ದೇನೆ' ಎಂದು ರಾಕುಲ್ ಹೇಳಿಕೊಂಡಿದ್ದಾರೆ.
'ಛತ್ರಿವಾಲಿ' ಚಿತ್ರವನ್ನು ತೇಜಸ್ ಪ್ರಭಾ ವಿಜಯ್ ಡಿಯೋಸ್ಕರ್ ನಿರ್ದೇಶಿಸುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಎಂದು ಹೇಳಲಾಗುತ್ತಿದೆ. ಖ್ಯಾತ ನಿರ್ಮಾಪಕ ರೋನಿ ಅವರ ಆರ್‌ಎಸ್‌ವಿಪಿ ಪ್ರೊಡಕ್ಷನ್ ಸಂಸ್ಥೆ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.
PublicNext
13/11/2021 04:28 pm