ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುನೀತ್​ ನಿಧನಕ್ಕೆ ನ.16 ರಂದು ಕನ್ನಡ ಚಿತ್ರರಂಗದಿಂದ ನಮನ

ಬೆಂಗಳೂರು:ಪುನಿತ್ ರಾಜಕುಮಾರ್ ನಿಧನಕ್ಕೆ ಕನ್ನಡ ಚಿತ್ರರಂಗ ನಮನ ಸಲ್ಲಿಸುತ್ತಿದೆ. ಅರಮನೆ ಮೈದಾನದಲ್ಲಿ ನವೆಂಬರ್-16 ರಂದು ಬೃಹತ್ ಕಾರ್ಯಕ್ರಮ ನಡೆಯಲಿದೆ.ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಈ ಆಯೋಜನೆ ಮಾಡುತ್ತಿದೆ.ಕಾರ್ಯಕ್ರಮದ ಪೂರ್ಣ ಖರ್ಚು ಫಿಲ್ಮ್​ ಚೇಂಬರ್​ ಭರಿಸುತ್ತಿದೆ ಎಂದು ಫಿಲ್ಮಂ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದ್ದಾರೆ.

ಅರಮನೆ ಮೈದಾನದ ಈ ಕಾರ್ಯಕ್ರಮ ಸಿನಿಮಾರಂಗದವರಿಗೆ ಮಾತ್ರ ಸೀಮಿತವಾಗಿದೆ.ರಾಜಕೀಯ ವ್ಯಕ್ತಿಗಳೂ ಇಲ್ಲಿ ಆಗಮಿಸುತ್ತಾರೆ. ಆದರೆ ಕಾರ್ಯಕ್ರಮದಲ್ಲಿ ಯಾವುದೇ ಮನರಂಜನಾ ಕಾರ್ಯಕ್ರಮ ಇರೋದಿಲ್ಲ. ವೇದಿಕೆ ಮೇಲೆ ಪುನೀತ್ ಪುತ್ಥಳಿ ಮಾತ್ರ ಇರುತ್ತದೆ ಎಂದು ಹೇಳಿದ್ದಾರೆ ಸಾ.ರಾ.ಗೋವಿಂದು.

3 ಗಂಟೆಗಳ ಈ ಕಾರ್ಯಕ್ರಮದಲ್ಲಿ ರಾಜ್ ಕುಟುಂಬದ ಸದಸ್ಯರೆಲ್ಲ ಭಾಗಿ ಆಗುತ್ತಿದ್ದಾರೆ. ಪಾಸ್ ವ್ಯವಸ್ಥೆ ಇರೋ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅವಕಾಶ ಇಲ್ಲವೇ ಇಲ್ಲ ಎಂದು ಸಾ.ರಾ.ಗೋವಿಂದು ಮಾಹಿತಿ ಕೊಟ್ಟಿದ್ದಾರೆ.

Edited By :
PublicNext

PublicNext

12/11/2021 09:05 pm

Cinque Terre

25.48 K

Cinque Terre

0