ಬೆಂಗಳೂರು:ಪುನೀತ್ ರಾಜಕುಮಾರ್ ನಿಧನಕ್ಕೆ ಇಡೀ ನಾಡೇ ಕಂಬನಿ ಮಿಡಿದಿದೆ.ಅಷ್ಟೇ ಯಾಕೆ ? ಪಕ್ಕದ ಕಾಲಿವುಡ್ ಮತ್ತು ಟಾಲಿವುಡ್ ನ ನಾಯಕ ನಟರೂ ಬಂದು ಪುನೀತ್ ಮನೆಯವರಿಗೆ ಸಂತಾಪ ಸೂಚಿಸಿ ಕಣ್ಣೀರು ಹಾಕಿ ಹೋಗಿದ್ದಾರೆ. ಆದರೆ, ಸೂಪರ್ ಸ್ಟಾರ್ ರಜನಿಕಾಂತ್ ಬರದೇ ಇರೋದಕ್ಕೆ ಪುನೀತ್ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಸಿಟ್ಟಿದೆ. ಇದಿರೋವಾಗ್ಲೇ, ರಜನಿಕಾಂತ್ ಟ್ವಿಟರ್ ಮೂಲಕ ಸಂತಾಪ ಸೂಚಿಸಿ ಮತ್ತಷ್ಟು ಕೆಂಗಣ್ಣಿಗೆ ಗುರಿ ಆಗಿದ್ದಾರೆ.
ಹೌದು. ಟಾಲಿವುಡ್ ನ ಬಹುತೇಕ ನಟರು-ನಟಿಯರು ಬೆಂಗಳೂರಿಗೆ ಬಂದು ಅಪ್ಪು ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಕಾಲಿವುಡ್ ನಟರಾದ ಸೂರ್ಯ,ವಿಶಾಲ್ ಕೂಡ ಬಂದು ಹೋಗಿದ್ದಾರೆ. ಆದರೆ ಕರ್ನಾಟಕದ ಸೂಪರ್ ಸ್ಟಾರ್ ರಜನಿಕಾಂತ್ ಬರದೇ ಇರೋದಕ್ಕೆ ಅನೇಕ ಟೀಕೆಗಳು ಕೇಳಿ ಬರ್ತಾನೆ ಇವೆ.
ಆದರೆ ಈ ನಡುವೇನೆ ರಜನಿಕಾಂತ್ ಟ್ವಿಟರ್ ಮೂಲಕ ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.ಇದರಿಂದ ರಜನಿಗೆ ಬೇಸರ ಆಗಿದಿಯೋ ಇಲ್ಲವೋ ಗೊತ್ತಿಲ್ಲ. ಅಪ್ಪು ಅಭಿಮಾನಿಗಳು ಬೇಸರ ಪಟ್ಟಿದ್ದಾರೆ. ಎಲ್ಲರೂ ಬಂದು ಹೋದರು ನಿಮಗೇನಾಗಿದೆ ಅನ್ನೋ ಅರ್ಥದಲ್ಲಿಯೇ ಟೀಕಿಸುತ್ತಲೇ ಇದ್ದಾರೆ. ಇಷ್ಟೆಲ್ಲ ಆದ್ಮೇಲೆ ಆದರೂ ರಜನಿ ಬರ್ತಾರಾ ಅನ್ನೋ ಪ್ರಶ್ನೆ ಈಗ ಮತ್ತೆ ಮತ್ತೆ ಕೇಳಿ ಬರುತ್ತಿದೆ.
PublicNext
11/11/2021 07:33 am