ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪುವಿನ ಆತ್ಮ ನಿಜಕ್ಕೂ ಮಾತಾಡ್ತಾ: ಹುಲೀಕಲ್ ನಟರಾಜ್‌ ಹೇಳಿದ್ದೇನು?

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಸಾವು ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನ ಕಲಕುತ್ತಲೇ ಇದೆ. ಆದರೆ ಪುನೀತ್‌ ರಾಜ್‌ಕುಮಾರ್‌ ಅವರ ಆತ್ಮದ ಜತೆಗೆ ತಾವು ಮಾತನಾಡಿರುವುದಾಗಿ ಸ್ಟೀವ್‌ ಹಫ್ ಹೇಳಿಕೊಂಡಿದ್ದು, ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ.

ಆದರೆ ಇದಾಗಲೇ ಹಲವಾರು ಪವಾಡಗಳನ್ನು ಬಯಲು ಮಾಡುವಲ್ಲಿ ನಿಸ್ಸೀಮರಾಗಿರುವ ಖ್ಯಾತಿಹೊತ್ತ ಹುಲೀಕಲ್ ನಟರಾಜ್‌ ಅವರು ಈ ವೈರಲ್ ವಿಡಿಯೋದ ಬಗ್ಗೆ ಮಾತನಾಡಿದ್ದಾರೆ. "ಇವೆಲ್ಲವೂ ಶುದ್ಧ ಸುಳ್ಳು, ಆತ್ಮದ ಜತೆ ಮಾತುಕತೆ ಸಾಧ್ಯವಿಲ್ಲ. ಇವೆಲ್ಲ ಕಣ್ಣುಕಟ್ಟು ವಿದ್ಯೆ" ಎಂದು ಅವರು ಹೇಳಿದ್ದಾರೆ.

ಕೆಲವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುವ ನಿಟ್ಟಿನಲ್ಲಿ ಖ್ಯಾತ ಚಿತ್ರನಟರ ಹೆಸರನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿ ಅವರ ಆತ್ಮದ ಜತೆ ಮಾತನಾಡಿದ್ದೇನೆ ಎಂದು ಭಾರತೀಯರನ್ನು ಮಾತ್ರವಲ್ಲದೇ ಇಂಥ ವಿಡಿಯೋ ವಿದೇಶಕ್ಕೂ ಕಳುಹಿಸಿ ಅಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದೊಂದು ರೀತಿಯಲ್ಲಿ ವಿಕೃತ ಮನಸ್ಸು. ಧ್ವನಿ ಬದಲಾವಣೆಯ ಸಾಧನ ಬಳಸಿಕೊಂಡು ಒಬ್ಬೊಬ್ಬ ಸೆಲೆಬ್ರಿಟಿಯ ಒಂದೊಂದು ದನಿ ಅದರಿಂದ ಪಡೆದು ಜನರನ್ನು ಮೋಸ ಮಾಡುತ್ತಿದ್ದಾರೆ. ಪುನೀತ್‌ ಅವರ ವಿಷಯದಲ್ಲಿಯೂ ಇದೇ ರೀತಿ ಆಗಿದೆ. ಯಾವುದೇ ಆತ್ಮ ಮಾತನಾಡಲಿಲ್ಲ. ಇಂಥ ಸುಳ್ಳು ವಿಡಿಯೋಗಳನ್ನು ಜನರು ನಂಬಬಾರದು ಎಂದು ಹುಲೀಕಲ್ ನಟರಾಜ್‌ ಹೇಳಿದ್ದಾರೆ.

ಸ್ಟೀವ್‌ ಹಫ್ ಈ ಹಿಂದೆ ನಟ ಸುಶಾಂತ್ ಸಿಂಗ‌ ರಜಪೂತ್, ಚಿರಂಜೀವಿ ಸರ್ಜಾ ಸೇರಿದಂತೆ ಹಲವು ಸೆಲೆಬ್ರಿಟಿಗಳ ಆತ್ಮಗಳ ಜತೆ ತಾವು ಮಾತನಾಡಿರುವುದಾಗಿ ಹೇಳಿಕೊಂಡು ವಿಡಿಯೋ ಬಿಡುಗಡೆ ಮಾಡಿದ್ದರು.

Edited By : Vijay Kumar
PublicNext

PublicNext

08/11/2021 10:49 pm

Cinque Terre

107.51 K

Cinque Terre

4