ಮುಂಬೈ:ಬಾಲಿವುಡ್ ನ ಪೋಷಕ ನಟ ಅನುಪಮ್ ಖೇರ್ ಈಗೊಂದು ಒಳ್ಳೆ ಕೆಲಸ ಮಾಡಿದ್ದಾರೆ. ಈ ಒಳ್ಳೆ ಕೆಲಸದಿಂದ ಇಡೀ ಬಾಲಿವುಡ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆ ಪ್ರಶಂಸೆ ಹರಿದು ಬರುತ್ತಿದೆ. ಆ ಒಳ್ಳೆ ಕೆಲಸ ಹೆಸರು ಆರತಿ. ಹೌದು. ಕಾಠ್ಮಂಡುವಿನಲ್ಲಿ ಭಿಕ್ಷೆ ಬೇಡುತ್ತಿದ್ದ ಇಂಗ್ಲೀಷ್ ಮಾತನಾಡೋ ಆರತಿ ಹೆಸರಿನ ಹುಡುಗಿಗೆ ಅನುಪಮ್ ಹೆಲ್ಪ್ ಮಾಡ್ತಿದ್ದಾರೆ.
ಅನುಪಮ್ ಖೇರ್ ಇತ್ತೀಚಿಗೆ ಕಾಠ್ಮಂಡುವಿಗೆ ಹೋಗಿದ್ದರು. ಇಲ್ಲಿ ದೇವಸ್ಥಾನವೊಂದರಲ್ಲಿ ಹುಡುಗಿಯೊಬ್ಬಳು ಭಿಕ್ಷೆ ಬೇಡುತ್ತಿದ್ದಳು. ಅನುಪಮ್ ಖೇರ್ ಬಳಿನೂ ದುಡ್ಡು ಪಡೆದಳು. ದುಡ್ಡಿನೊಂದಿಗೆ ಅಲ್ಲಿಂದ ಹೋಗದೇ ಇರೋ ಈ ಆರತಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾಳೆ .ತನ್ನ ಓದಿನ ಆಸಕ್ತಿಯನ್ನೂ ಅನುಪಮ್ ಖೇರ್ ತಿಳಿಸಿದ್ದಾಳೆ. ರಾಜಸ್ಥಾನದ ಮೂಲದ ಆರತಿಯ ನಿರರ್ಗಳ ಇಂಗ್ಲೀಷ್ ಕೇಳಿ ಮಂತ್ರಮುಗ್ಧಗೊಂಡ ಅನುಪಮ್ ಖೇರ್, ವ್ಯಾಸಂಗ ಮಾಡಲು ಹೆಲ್ಪ್ ಮಾಡೋದಾಗಿ ಭರವಸೆ ಕೊಟ್ಟು ಬಂದಿದ್ದಾರೆ.
PublicNext
03/11/2021 09:58 pm