ದೀಪಾವಳಿ ಸಂಭ್ರಮವನ್ನು ಹೆಚ್ಚಿಸುವಲ್ಲಿ ಪಟಾಕಿಗಳು ಒಂದು. ಆದರೆ ವಾಯುಮಾಲಿನ್ಯ ಹೆಸರಿನಲ್ಲಿ ಪಟಾಕಿ ಸಿಡಿಸಲು ಅನುಮತಿ ನೀಡಿಲ್ಲ. ಈ ಕುರಿತು ಮಾತನಾಡಿದ ನಟಿ ಕಂಗನಾ ರಣಾವತ್ ಅವರು ಪಟಾಕಿಗಳನ್ನು ಬ್ಯಾನ್ ಮಾಡುವಂತೆ ಆಗ್ರಹಿಸುತ್ತಿರುವ ವಿರುದ್ಧ ಇನ್ಸ್ಟಾಗ್ರಾಮ್ ವೊಂದರಲ್ಲಿ ಪೋಸ್ಟ್ ಹಾಕಿದ್ದಾರೆ.
ಸದ್ಗುರು ಪಟಾಕಿ ಬಗ್ಗೆ ಹೇಳಿರುವ ವಿಡಿಯೋವೊಂದನ್ನು ಹಂಚಿಕೊಂಡು, ಕಂಗನಾ ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೆಲವರು ಪರಿಸರದ ಬಗ್ಗೆ ಇದ್ದಕ್ಕಿದ್ದಂತೆ ಕಾಳಜಿ ಮಾಡಿ ಮಕ್ಕಳು ಪಟಾಕಿ ಹೊಡೆಯಬಾರದು ಅಂತ ಹೇಳ್ತಿದ್ದಾರೆ, ಅದು ಸರಿಯಲ್ಲ. ಗಾಳಿ, ಪರಿಸರದ ಬಗ್ಗೆ ಕಾಳಜಿ ಹೊಂದಿರುವವರು 3 ದಿನ ಆಫೀಸ್ ಗೆ ಕಾರ್ ಓಡಿಸಬೇಡಿ, ಮಕ್ಕಳಿಗೆ ಪಟಾಕಿ ಹೊಡೆಯಲು ಬಿಡಿ. ಈ ತ್ಯಾಗ ಮಾಡುವುದರಿಂದ ಮಕ್ಕಳು ಪಟಾಕಿ ಹೊಡೆದು ಎಂಜಾಯ್ ಮಾಡಬಹುದು" ಎಂದು ಸದ್ಗುರು ಹೇಳಿದ್ದಾರೆ.
"ದೀಪಾವಳಿ ಹೋರಾಟಗಾರರಿಗೆ ಇದು ಸರಿಯಾದ ಉತ್ತರ. ಅಂತಹವರು ಮೂರು ದಿನ ಆಫೀಸ್ ಗೆ ಕಾರ್ ತೆಗೆದುಕೊಂಡು ಹೋಗಬೇಡಿ. ಮಿಲಿಯನ್ ಗಟ್ಟಲೇ ಮರಗಳನ್ನು ವಿಶ್ವದಾದ್ಯಂತ ನೆಟ್ಟಿ ರೆಕಾರ್ಡ್ ಮಾಡಿದವರು ಈ ಮನುಷ್ಯ" ಎಂದು ಕಂಗನಾ ರಣಾವತ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
PublicNext
03/11/2021 09:32 pm