ಬೆಂಗಳೂರು: ಪುನೀತ್ ರಾಜಕುಮಾರ್ ಸಾವು ಇಡೀ ಇಂಡಸ್ಟ್ರೀಗೆ ನೋವು ತಂದಿದೆ. ಪಕ್ಕದ ಟಾಲಿವುಡ್ ನಲ್ಲೂ ಒಳ್ಳೆ ನಂಟು ಹೊಂದಿದ್ದ ಪುನೀತ್ ಸ್ನೇಹಿತರು ಈಗ ಅಲ್ಲಿಂದ ಬೆಂಗಳೂರಿಗೆ ಬಂದು ರಾಜ್ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ.ಚಿರಂಜೀವಿ ಪುತ್ರ ರಾಮಚರಣ್ ತೇಜಾ ಇವತ್ತು ಶಿವರಾಜ್ ಕುಮಾರ್ ಮನೆಗೆ ಬಂದು ಸಾಂತ್ವನ ಹೇಳಿದ್ದಾರೆ.
ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಶಿವರಾಜ್ ಕುಮಾರ್ ಅವರ ಶ್ರೀಮುತ್ತು ಮನೆಗೆ ರಾಮ್ ಚರಣ ತೇಜಾ ಬಂದಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ ನಲ್ಲಿರೋ ಶಿವರಾಜ್ ಕುಮಾರ್ ಮನೆಯಲ್ಲಿ ರಾಮ್ ಚರಣ್ ತೇಜಾ ಇದ್ದು ಶಿವರಾಜ್ ಕುಮಾರ್ ಜೊತೆಗೆ ಮಾತನಾಡಿದ್ದಾರೆ.ಸಾಂತ್ವನವನ್ನೂ ಹೇಳಿ ಹೋಗಿದ್ದಾರೆ.
PublicNext
03/11/2021 02:25 pm