ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರಳಿ ಮನೆಗೆ ಬಂದ ಸೂಪರ್ ಸ್ಟಾರ್ ರಜನಿಕಾಂತ್

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಇಲ್ಲಿಯ ಕಾವೇರಿ ಆಸ್ಪತ್ರೆಯಿಂದ ಈಗ ಡಿಸ್ಚಾರ್ಜ್ ಆಗಿದ್ದಾರೆ. ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದ ರಜನಿ ಮನೆಗೆ ಬಂದಿದ್ದಾರೆ. ಈ ವಿಷಯವನ್ನ ಸ್ವತಃ ರಜನಿಕಾಂತ್ ಟ್ವಿಟರ್ ಮೂಲಕವೇ ತಿಳಿಸಿದ್ದಾರೆ.

ಕಳೆದ ಗುರುವಾರ ರಜನಿಕಾಂತ್ ಅವರನ್ನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮನೆಯವರು ಇದು ಜನರಲ್ ಚೆಕಪ್ ಅಂತಲೂ ಹೇಳಿದ್ದರು. ಆದರೆ ರಜನಿಗೆ ರಕ್ತ ಪೂರೈಸೋ ಕುತ್ತಿಗೆ ಮೇಲಿನ ಪ್ರಮುಖ ನಾಳ ಬ್ಲಾಕ್ ಆಗಿತ್ತು. ಅದರ ಶಸ್ತ್ರಚಿಕಿತ್ಸೆಯನ್ನ ಮಾಡಿಸಿಕೊಂಡೇ ಈಗ ರಜನಿಕಾಂತ್ ಆಸ್ಪತ್ರೆಯಿಂದ ಮನೆಗೆ ವಾಪಾಸ್ ಆಗಿದ್ದಾರೆ.

Edited By :
PublicNext

PublicNext

01/11/2021 05:28 pm

Cinque Terre

53.52 K

Cinque Terre

1