ಬೆಂಗಳೂರು : ಪುನೀತ್ ಸಾವಿನ ಸುದ್ದಿ ಕೇಳಿ ನಮಗಿಂತ ಹತ್ತುಪಟ್ಟು ‘ಅಭಿಮಾನಿಗಳು ನೋವಿನಲ್ಲಿದ್ದಾರೆ. ಕೆಲವು ಅಭಿಮಾನಿಗಳು ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಆ ಬಗ್ಗೆ ವರದಿ ನೋಡಿದ್ದೇನೆ ಯಾರು ಆತ್ಮಹತ್ಯೆಯಂತ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಶಿವರಾಜ್ ಕುಮಾರ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಜೀವ ಅಮೂಲ್ಯವಾದ್ದದ್ದು, ಅದು ಗಿಫ್ಟ್ ಇದ್ದಹಾಗೆ, ನೋವನ್ನು ನುಂಗಿಕೊಂಡು ಬದುಕಬೇಕು ಎಂದು ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ನಾವು ಪುಣ್ಯ ಮಾಡಿದ್ದೆವು. ಎಲ್ಲರ ಪ್ರೀತಿ ವಿಶ್ವಾಸ ನೋಡಿದರೆ ಏನು ಹೇಳೋಕೂ ಆಗಲ್ಲ,ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
PublicNext
01/11/2021 03:18 pm