ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಯುವರತ್ನ'ಗೆ ಮಕ್ಕಿಮನೆ ಕಲಾವೃಂದ ಭಾಷ್ಪಾಂಜಲಿ; ದೇಶ- ವಿದೇಶಿ ಗಣ್ಯರಿಂದ ಅಂತಿಮ ನಮನ

ಮಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ನಗರದ ಮಕ್ಕಿಮನೆ ಕಲಾವೃಂದ ಆನ್ ಲೈನ್ ಮೂಲಕ ನುಡಿನಮನ ಸಲ್ಲಿಸಿತು.ಈ ಕಾರ್ಯಕ್ರಮದಲ್ಲಿ ದೇಶ - ವಿದೇಶಗಳ ಗಣ್ಯರು "ದೊಡ್ಮನೆ ಹುಡ್ಗ" ನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಡಾ.ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ರಾಜ್ಯ ಬಿಜೆಪಿ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್, ಸಂಗೀತ ನಿರ್ದೇಶಕ ವಿ. ಮನೋಹರ್, ತುಳು ರಂಗಭೂಮಿ, ಸಿನಿಮಾ ನಟ ಭೋಜರಾಜ್ ವಾಮಂಜೂರು, ಸರ್ವೋತ್ತಮ ಶೆಟ್ಟಿ ಅಬುಧಾಬಿ, ಸುದೀಪ್ ಹೆಬ್ಬಾರ್ ಅಮೆರಿಕ, ಪ್ರಕಾಶ್ ಸುಬ್ಬಣ್ಣ ಟೊರೊಂಟೊ ಕೆನಡಾ, ವಿಜಯಕುಮಾರ್ ಹಲಗಲಿ ಸಿಡ್ನಿ ಆಸ್ಟ್ರೇಲಿಯಾ, ಸುಬ್ರಹ್ಮಣ್ಯ ಹ್ಯಾಂಬರ್ಗ್ ಜರ್ಮನಿ, ಸಿಂಧು ಕುಲಾಲ್ ಕೆನಡಾ, ಶ್ರೀನಿವಾಸ್ ಪ್ರಸಾದ್ ಅಮೆರಿಕ, ದಿವ್ಯ ಆಲೂರು, ರತ್ನ ಶಂಕರ್ ಮೈಸೂರು, ಚಿತ್ತಾ ಜಿನೇಂದ್ರ ಬೆಂಗಳೂರು, ಅರಿಹಂತ್ ಜೈನ್ ಬೆಂಗಳೂರು, ಎನ್.ಪ್ರಸನ್ನ ಕುಮಾರ್ ಮೈಸೂರು, ಚಿತ್ರಾಲಿ ಮಂಗಳೂರು, ನಿಹಾಲ್ ಸಾಗರ್ ಬೆಂಗಳೂರು, ಅನುಷ್ಕಾ ಆರ್.ಟಿ. ಧಾರವಾಡ, ಅರ್ಚಿತ್ ಎ. ಜೈನ್ ನುಡಿನಮನ ಸಲ್ಲಿಸಿದರು.

ಮಕ್ಕಿಮನೆ ಕಲಾವೃಂದದ ಸುದೇಶ್ ಜೈನ್, ನಿರಂಜನ್ ಜೈನ್ ಕುದ್ಯಾಡಿ, ಉಜ್ವಲ್ ಜೈನ್ ಮೇಗುಂದ, ವಜ್ರ ಕುಮಾರ್ ಬೆಂಗಳೂರು, ಪೂಜಾ ಪೈ ಮಂಗಳೂರು ಮತ್ತಿತರರು ಭಾಗವಹಿಸಿದ್ದರು. ನೇಹಾ,ನೀತ್ಯ, ಸುಶ್ಮಿತಾ, ನಿಶ್ಚಿತಾ, ಚಿಂತನಾ ದೇವರಮನೆ ಹೊರನಾಡು ಅವರು ಪುನೀತ್ ಅವರ ಹಾಡು ಹಾಡಿದರು.

Edited By : Manjunath H D
PublicNext

PublicNext

31/10/2021 11:19 am

Cinque Terre

58.86 K

Cinque Terre

1