ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಗನನ್ನು ಕಳೆದುಕೊಂಡಂತೆ ಎದೆ ಭಾರವಾಗುತ್ತಿದೆ- ಶಿವಣ್ಣ

ಬೆಂಗಳೂರು: ಅಪ್ಪು ಇಲ್ಲವೆಂದು ಹೇಳೋದಕ್ಕೆ ಕಷ್ಟ ಆಗುತ್ತಿದೆ,ಅಪ್ಪು ಎಲ್ಲರ ಮನದಲ್ಲಿಯೂ ಇರುತ್ತಾನೆ.ಸಹೋದರ ಪುನೀತ್​ ನಿಧನದಿಂದ ಬಹಳ ನೋವಾಗಿದೆ,ನಿಧನದ ನೋವು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಶಿವಣ್ಣ ಗದ್ಗದಿತರಾಗಿ ಮಾದ್ಯಮದ ಮುಂದೆ ನುಡಿದಿದ್ದಾರೆ.

ಪುನೀತ್ ಮತ್ತೆ ಬರುತ್ತಾನೆ,ನನ್ನ ಮಗನನ್ನೇ ಕಳೆದುಕೊಂಡಷ್ಟು ನೋವಾಗ್ತಿದೆ ನನಗೆ.ಸರ್ಕಾರ, ಪೊಲೀಸರು, ಜನರೆಲ್ಲರೂ ಸಹಕಾರ ನೀಡಿದ್ರು ಎಲ್ಲರೂ ನಮಗೆ ಸಪೋರ್ಟ್ ಮಾಡಿದ್ದಾರೆ.ಸರ್ಕಾರ ಉತ್ತಮವಾದ ಸಹಕಾರ ನೀಡಿದ್ದಕ್ಕೆ ಧನ್ಯವಾದ ಎಂದರು.

ರಾಜ್ಯ ಸರ್ಕಾರ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದೆ. ಹಾಲು-ತುಪ್ಪ ಕಾರ್ಯ ಆಗುವ ತನಕ ಸಮಾಧಿ ಬಳಿ ಸಾರ್ವಜನಿಕರು ಬರಲು ಅವಕಾಶವಿಲ್ಲ ನಿಮ್ಮ ಅಪ್ಪುನಾ ನೀವ್ ನೋಡದೇ ಇನ್ಯಾರು ನೋಡಬೇಕು ಆದಷ್ಟು ಬೇಗ ಸಾರ್ವಜನಿಕರಿಗೂ ಅವಕಾಶ ನೀಡುತ್ತೇವೆ,

ಯಾರೂ ಆತ್ಮಹತ್ಯೆಯಂತಹ ಆತುರದ ನಿರ್ಧಾರ ಮಾಡಬೇಡಿ ಅಭಿಮಾನ‌ ಇರಲಿ ಆದರೆ ಅದರಿಂದ ಹಾನಿಯಾಗಬಾರದು

ನಿಮ್ಮ ಕುಟುಂಬಗಳಿಗೆ ನೀವು ಮುಖ್ಯ ಎಂದು ಭಾವುಕರಾದರು ಶಿವಣ್ಣ.

ಎಲ್ಲರೂ ನೋವನ್ನು ನುಂಗಿ ಮುಂದೆ ನಡೆಯಬೇಕು, ನಾವು ಎಲ್ಲವನ್ನೂ ಮರೆತು ಜೀವನದಲ್ಲಿ ಸಾಗಬೇಕೆಂದು ಎಲ್ಲರಿಗೂ ಧೈರ್ಯ ತುಂಬಿದರು ಶಿವಣ್ಣ.

Edited By : Manjunath H D
PublicNext

PublicNext

31/10/2021 09:55 am

Cinque Terre

58.93 K

Cinque Terre

0