ಕಲಬುರಗಿ: ಸ್ಯಾಂಡಲ್ವುಡ್ ಪವರ್ಸ್ಟಾರ್, ನಟ ಪುನೀತ್ ರಾಜ್‌ಕುಮಾರ್ ದಿಢೀರ್ ಸಾವು ಇಡೀ ಕರ್ನಾಟಕ ಆಘಾತಕ್ಕೆ ಒಳಗಾಗಿದೆ. ಸದಾ ಲವಲವಿಕೆ, ನಗು ಮುಖದಿಂದ ಇರುವ ಪುನೀತ್ ಸಾವು ಅರಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಬಂದೊದಗಿದೆ. ಅಪ್ಪು ಮಾರ್ಚ್ 21ರಂದು ಕಲಬುರಗಿ ಜನತೆಗೆ ಕೊಟ್ಟ ಮಾತು ಕೊನೆಗೂ ಈಡೇರಲಿಲ್ಲ.
ಹೌದು. ಕಳೆದ ಮಾರ್ಚ್ 21ರಂದು 'ಯುವರತ್ನ' ಸಿನಿಮಾದ ಪ್ರಚಾರಕ್ಕಾಗಿ ಆಗಮಿಸಿದ್ದ ಪುನೀತ್ ರಾಜ್‌ಕುಮಾರ್ ಕಲಬುರಗಿಗೆ ತೆರಳಿದ್ದರು. ಈ ವೇಳೆ ಮುಂದಿನ ಚಿತ್ರದ ಚಿತ್ರೀಕರಣ ಬಿಸಿಲೂರು ಕಲಬುರಗಿಯಲ್ಲಿ ನಡೆಸುವುದಾಗಿ ಹೇಳಿದ್ದರು. ಕಲಬುರಗಿ ಜನ ಇಂದಲ್ಲ ನಾಳೆ ಕಲಬುರಗಿಗೆ ಬಂದು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವರು ಎಂದು ಜನ ನಿರೀಕ್ಷೆ ಹೊಂದಿದ್ದರು. ಆದರೆ ವಿಧಿಯಾಟ ಅವಕಾಶ ನೀಡದಂತೆ ಮಾಡಿದೆ.
ಪುನೀತ್ ರಾಜ್‌ಕುಮಾರ ಕಳೆದುಕೊಂಡಿರುವುದು ಕಲಬುರಗಿಯಲ್ಲೂ ದುಃಖದ ಛಾಯೆ ಎಲ್ಲೆಡೆ ಆವರಿಸಿದೆ. ಕಲಬುರಗಿಯಲ್ಲಿ ಪುನೀತ್ ಅವರ ಸಿನಿಮಾ ಚಿತ್ರೀಕರಣ ನೋಡಬೇಕೆಂದು ಲಕ್ಷಾಂತರ ಕಣ್ಣುಗಳು ತದೇಕ ಚಿತ್ತದಿಂದ ಕಾಯುತ್ತಿದ್ದವು. ಈಗ ಈ ಕಣ್ಣುಗಳಲ್ಲಿ ಕಣ್ಣೀರು ಸುರಿಯಲಾರಂಭಿಸಿರುವುದು ಒಂದು ವಿಧಿಯೇ ಸರಿ.
PublicNext
30/10/2021 11:02 am