ಬೆಳಗಾವಿ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನದ ಸುದ್ದಿ ಕೇಳಿ ಬೆಳಗಾವಿಯ ಅಭಿಮಾನಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಶಿಂಧೋಳ್ಳಿ ಗ್ರಾಮದ ಕನಕದಾಸ ನಗರದ ಪರುಶರಾಮ ಹನುಮಂತ ದೇಮಣ್ಣವರ(33) ಮೃತ ಯುವಕ. ಪುನೀತ್ ರಾಜ್‌ಕುಮಾರ್ ಸಾವಿನ ಸುದ್ದಿ ಕೇಳಿ ಶುಕ್ರವಾರ ಸಂಜೆಯಿಂದ ಟಿವಿ ಎದುರು ಕುಳಿತಿದ್ದನು. ಸಾವಿನಿಂದ ಆಘಾತಗೊಂಡು ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಮಾಳಿ ಕೆಲಸ ಮಾಡುತ್ತಿದ್ದ ಪರುಶರಾಮ ದೇಮಣ್ಣವರ ನಟರಾದ ಶಿವರಾಜ್ ಕುಮಾರ ಹಾಗೂ ಪುನೀತ್ ರಾಜಕುಮಾರನ ಅಪ್ಪಟ ಅಭಿಮಾನಿ ಆಗಿದ್ದನು. ಚಿತ್ರ ಬಿಡುಗಡೆ ಆದಾಗ ಮೊದಲ ಶೋ ನೋಡಲು ಹೋಗುತ್ತಿದ್ದ. ಶುಕ್ರವಾರ ಕೆಲಸ ಮುಗಿಸಿಕೊಂಡು ಬಂದು ಟಿವಿ ಎದುರು ಕುಳಿತಿದ್ದ. ಅಪ್ಪುವಿನ ಪಾರ್ಥೀವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಶುಕ್ರವಾರ ರಾತ್ರಿ ಆಘಾತಗೊಂಡು ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
PublicNext
30/10/2021 10:11 am