ದಾವಣಗೆರೆ: ಸದಾ ಸಹಾಯದ ಹಸ್ತ ಚಾಚುವ ಗುಣವನ್ನು ಹೊಂದಿದ್ದ ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಷ್ಟ ಎಂದು ಬಂದವರಿಗೆ ಸಹಾಯ ಮಾಡುತ್ತಿದ್ದರು. ಇದಕ್ಕೆ ಉದಾಹರಣೆ ಎಂಬಂತೆ ದಾವಣಗೆರೆ ಮೂಲದ ಬಾಲಕಿಯ ಶಸ್ತ್ರಚಿಕಿತ್ಸೆಗೆ ಆಸರೆಯಾಗಿ ಆರ್ಥಿಕ ಸಹಾಯ ಮಾಡಿ ಮರು ಜೀವ ನೀಡಿದ್ದರು.
ಚನ್ನಗಿರಿಯ ಕುಮಾರ್ ಹಾಗೂ ಮಂಜುಳ ಎನ್ನುವರ ಪುತ್ರಿ ಪ್ರೀತಿ ಅಪ್ಪಟ ಅಪ್ಪು ಅಭಿಮಾನಿಯಾಗಿದ್ದಳು. 2017 ರಲ್ಲಿ ಬಾಲಕಿ ಪ್ರೀತಿಗೆ ಎರಡು ಕಿಡ್ನಿಗಳು ನಿಷ್ಕ್ರಿಯಗೊಂಡಿದ್ದವು, ಆಗ ಬಾಲಕಿ ವೀಡಿಯೋ ಮೂಲಕ ಸಾಯುವುದಕ್ಕೂ ಮೊದಲು ಪುನೀತ್ ರಾಜ್ ಕುಮಾರ್ ಅವರನ್ನು ನೋಡಬೇಕು ಎಂದು ಹಂಬಲಿಸಿದ್ದಳು. ಪುನೀತ್ ರಾಜ್‍ಕುಮಾರ್ ಬಾಲಕಿ ಪ್ರೀತಿಯ ಆಸೆಯನ್ನು ಪೂರೈಸಿದ್ದರು.
ಬಾಲಕಿ ಪ್ರೀತಿಯನ್ನು ಭೇಟಿಯಾಗಿ ಆಪರೇಷನ್‌ಗೆ ಬೇಕಾಗುವ ಆರ್ಥಿಕ ಸಹಾಯ ಮಾಡಿದ್ದ ಪುನೀತ್ 15 ಲಕ್ಷ ರೂ ಶಸ್ತ್ರಚಿಕಿತ್ಸೆಗೆ ನೀಡಿ ಸಹಾಯ ಹಸ್ತ ಚಾಚಿದ್ದರು. ಅಲ್ಲದೆ ಆ ಬಾಲಕಿಗೆ ಒಂದು ಬ್ಯಾಗ್ ಅನ್ನು ಉಡುಗೊರೆಯಾಗಿ ನೀಡಿದ್ದು, ಯಾವುದೇ ಸಮಸ್ಯೆ ಆದರು ನನ್ನ ಬಳಿ ಬಾ ಎಂದು ಬಾಲಕಿಗೆ ಭರವಸೆಯನ್ನು ನೀಡಿದ್ದರು.
PublicNext
30/10/2021 07:50 am