ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ: ಅಪ್ಪು ಇನ್ನಿಲ್ಲದ ಸುದ್ದಿ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ ಅಭಿಮಾನಿ

ಚಾಮರಾಜನಗರ: ಅಪ್ಪು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಾ ಇದ್ದಂತೆ ದಿಗ್ಭ್ರಾಂತಗೊಳಗಾದ ಅಪ್ಪಟ ಅಭಿಮಾನಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾ.ಪಂ ವ್ಯಾಪ್ತಿಯ ಮರೂರುವಿನಲ್ಲಿ ನಡೆದಿದೆ.

ಜಮೀನಿನ ಕೆಲಸ ಮುಗಿಸಿ ಮಧ್ಯಾಹ್ನ ಊಟಕ್ಕೆ ಬಂದಿದ್ದ ಮುನಿಯಪ್ಪ ಟಿವಿ ಹಾಕಿದ ವೇಳೆ ಪುನೀತ್ ಸಾವಿನ ಸುದ್ದಿ ನೋಡಿದ್ದಾನೆ. ಭಾರೀ ಆತಂಕಕ್ಕೆ ಒಳಗಾದ ಮುನಿಯಪ್ಪ ಟಿವಿ ನೋಡ ನೋಡುತ್ತಿದ್ದಂತೆ ಕುಸಿದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ. ಈತನನ್ನು ಚಿಕಿತ್ಸೆಗೆಂದು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಾಗಲೇ ಪ್ರಾಣಪಕ್ಷಿ ಹಾರಿಹೋಗಿ ಅಪ್ಪುವಿನೊಂದಿಗೆ ಇಹಲೋಕ ತ್ಯಜಿಸಿದ್ದಾನೆ.

ಮುನಿಯಪ್ಪ ಊರಲ್ಲಿ ಥಿಯೇಟರ್‌ಗಳು ಚೆನ್ನಾಗಿರುವುದಿಲ್ಲವೆಂದು ಬೆಂಗಳೂರಿಗೆ ತೆರಳಿ ಅಲ್ಲೇ ಅಪ್ಪು ಚಿತ್ರಗಳನ್ನು ಎರಡು ಮೂರು ಶೋಗಳನ್ನು ನೋಡಿ ಬರುತ್ತಿದ್ದ. ಅಪ್ಪು ಅಪ್ಪಟ ಅಭಿಮಾನಿಯಾಗಿದ್ದ ಮುನಿಯಪ್ಪ ಪತ್ನಿ, ಇಬ್ಬರು ಮಕ್ಕಳು ಹಾಗೂ ಓರ್ವ ತಂಗಿಯನ್ನ ಅಗಲಿದ್ದಾನೆ.

Edited By : Vijay Kumar
PublicNext

PublicNext

29/10/2021 09:14 pm

Cinque Terre

108.23 K

Cinque Terre

2