ಹುಬ್ಬಳ್ಳಿ: ಪವರ್ ಸ್ಟಾರ್ ಪುನೀತ್ ಗೆ ರಾಜ್ಯದ್ಯಾಂತ ಅಭಿಮಾನಿಗಳಿದ್ದಾರೆ. ಎಲ್ಲರೂ ಪುನೀತರನ್ನ ಇಷ್ಟಪಡೋರೇ. ಯಾರಿಗೂ ನೋವು ಕೊಡದ ಅಪ್ಪು ಸದಾ ಅಭಿಮಾನಿಗಳ ಹೃದಯಲ್ಲಿಯೇ ಇರುತ್ತಾರೆ. ಆದರೆ ಹುಬ್ಬ ಳ್ಳಿ ಸಮೀಪದ ಮಂಟೂರು ಗ್ರಾಮದ ಪುನೀತ್ ಅಭಿಮಾನಿ ಡ್ರೈವರ್ ಆನಂದ್, ಪುನೀತ್ ಸಾವಿನ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಪುನೀತ್ ಬದುಕಲೇ ಬೇಕು ಅಂತ ತಮ್ಮ ಹೃದಯವನ್ನೇ ಕೊಡಲು ಸಜ್ಜಾಗಿದ್ದಾರೆ.ಪುನೀತ್ ಹೋದರೆ ಇಡೀ ನಾಡಿಗೆ ನಷ್ಟವಾಗುತ್ತದೆ. ನಾನು ಹೋದರೆ, ಮನೆಯ ನಾಲ್ಕು ಜನ ನಾಲ್ಕು ದಿನ ಅಳುತ್ತಾರೆ ಅಷ್ಟೆ. ಅಪ್ಪು ಬದುಕಬೇಕು.ಅಪ್ಪು ಸಾವು ನನಗೆ ತೀವ್ರ ದು:ಖ ತಂದಿದೆ. ಅವರಿಗೆ ನನ್ನ ಹೃದಯ ಕೊಡಲು ನಾನು ಸಿದ್ಧ ಅಂತ ಅಪ್ಪು ಅಪ್ಪಟ್ಟ ಅಭಿಮಾನಿ ಆನಂದ್ PublicNext ಜೊತೆಗೆ ತಮ್ಮ ನೋವು ತೋಡಿಕೊಂಡಿದ್ದಾರೆ. ಅದು ಹೀಗಿದೆ.
PublicNext
29/10/2021 04:59 pm