ಬೆಂಗಳೂರು:ಪುನೀತ್ ರಾಜಕುಮಾರ್ ಅಭಿನಯದ ಸಿನಿಮಾಗಳ ಗತ್ತು ವಿಭಿನ್ನವಾಗಿಯೇ ಇದೆ. ಇಂಡಸ್ಟ್ರೀಯಲ್ಲಿ ಚಾಲ್ತಿರೋ ಒಂದು ಸತ್ಯ ಏನಪ್ಪ ಅಂದ್ರೆ, ಪುನೀತ್ ರಾಜಕುಮಾರ್ ಅವರ ಮೇಲೆ ದುಡ್ಡು ಹಾಕಿದರೇ ಅದು ವಾಪಾಸ್ ಬಂದೇ ಬರುತ್ತದೆ. ಅಂತಹ ಈ ಪವರ್ ಸ್ಟಾರ್ ಅನೇಕ ನಿರ್ಮಾಪಕರಿಗೆ ಲಕ್ಕಿ ಸೂಪರ್ ಸ್ಟಾರ್. ಈ ಸೂಪರ್ ಸ್ಟಾರ್ ಸಾವು ನ್ಯಾಯವೇ ಎಂದು ಕೇಳುತ್ತಿದೆ ಇಡೀ ಇಂಡಸ್ಟ್ರೀ.ಅದರಂತೆ ಪುನೀತ್ ಒಪ್ಪಿಕೊಂಡ ಸಾಲು ಸಾಲು ಸಿನಿಮಾಗಳಲ್ಲಿ ಜೇಮ್ಸ್ ಕೂಡ ಒಂದು.ಬಹದ್ದೂರ್ ಚೇತನ್ ನಿರ್ದೇಶನದ ಈ ಚಿತ್ರವನ್ನ ಅಷ್ಟೇ ಪ್ರೀತಿಯಿಂದಲೇ ಮಾಡಿಕೊಟ್ಟಿದ್ದರು ಪುನೀತ್ ರಾಜಕುಮಾರ್. ಪುನೀತ್ ಅಭಿನಯದ ಈ ಚಿತ್ರದ ಕೆಲಸ ಶೇಕಡ 70 ರಷ್ಟಾಗಿದೆ. ಅತೀ ವೇಗದಲ್ಲಿಯೇ ಕೆಲಸ ಮಾಡುತ್ತಿದ್ದ ಪುನೀತ್ ರಾಜಕುಮಾರ್, ಜೇಮ್ಸ್ ಚಿತ್ರದ ಶೇಡಕ 70 ರಷ್ಟು ಕೆಲಸ ಮುಗಿಸಿಕೊಟ್ಟಿದ್ದಾರೆ. ಇನ್ನೇನು ಕೇವಲ 30 ರಷ್ಟು ಕೆಲಸ ಬಾಕಿ ಇದೆ ಅಷ್ಟೆ. ಇದರ ಹೊರತಾಗಿ ದ್ವಿತ್ವ ಚಿತ್ರ ಕೂಡ ಒಪ್ಪಿಕೊಂಡಿದ್ದರು ಪುನೀತ್. ಇದರ ಒಂದಷ್ಟು ಕೆಲಸವನ್ನೂ ಮಾಡಿ ಹೋಗಿದ್ದಾರೆ ಪವರ್ ಸ್ಟಾರ್ ಪುನೀತ್.
PublicNext
29/10/2021 03:10 pm