ಬೆಂಗಳೂರು:ಕಿಚ್ಚ ಸುದೀಪ್ ಮುಂದೊದು ದಿನ ಸಾಹಸ ಸಿಂಹ ವಿಷ್ಣುವರ್ಧನ ಅವರ ಮೇಲೆ ಪುಸ್ತಕ ಬರೆಯೋ ಪ್ಲಾನ್ ಮಾಡಿದ್ದಾರೆ. ಕೋಟಿಗೊಬ್ಬ-03 ಚಿತ್ರದ ಸಕ್ಸಸ್ ಮೀಟ್ ಅಲ್ಲಿ ಕಿಚ್ಚ ಸುದೀಪ್ ಈ ವಿಶೇಷ ವಿಷಯವನ್ನ ಹೇಳಿಕೊಂಡಿದ್ದಾರೆ.
ಸಾಹಸ ಸಿಂಹ ಇರದೇ ಇದ್ದರೇ, ಕೋಟಿಗೊಬ್ಬ-2 ಬರುತ್ತಿರಲಿಲ್ಲ. ಕೋಟಿಗೊಬ್ಬ-3 ಚಿತ್ರವೂ ಆಗುತ್ತಿರಲಿಲ್ಲ. ಅವರಿದ್ದ ಕಾರಣಕ್ಕೇನೆ ಇದು ಸಾಧ್ಯವಾಗಿದೆ. ವಿಷ್ಣುವರ್ಧನ್ ಬಗ್ಗೆ ನಾನು ಜಾಸ್ತಿ ತಿಳಿದುಕೊಂಡಿಲ್ಲ. ಆದರೆ ಅವರೊಟ್ಟಿಗೆ ಕಳೆದಿರೋ ಕ್ಷಣಗಳನ್ನ ಬರೆಯುತ್ತೇನೆ. ವಿಷ್ಣು ಅವರಿಗೆ ಸೆನ್ಸ್ ಆಫ್ ಹ್ಯೂಮರ್ ಚೆನ್ನಾಗಿತ್ತು ಎಂದು ಹೇಳಿದ್ದಾರೆ ಕಿಚ್ಚ ಸುದೀಪ್. ಆದರೆ ವಿಷ್ಣು ಮೇಲಿನ ತಮ್ಮ ಪುಸ್ತಕದ ಬಗ್ಗೆ ಈಗಲೇ ಹೆಚ್ಚೇನೂ ಬಿಟ್ಟುಕೊಟ್ಟಿಲ್ಲ.
PublicNext
23/10/2021 07:30 am