ಬೆಂಗಳೂರು: ಕನ್ನಡದಲ್ಲಿ ಭಜರಂಗಿ ಚಿತ್ರ ಇತಿಹಾಸ ಸೃಷ್ಟಿಸಿತ್ತು. ಇದರ ಮುಂದುವರೆದ ಭಜರಂಗಿ-2 ಹೊಸ ಭರವಸೆ ಮೂಡಿಸಿದೆ.ಮತ್ತೊಂದು ಗೆಲುವಿನ ನಿರೀಕ್ಷೆಯನ್ನ ಹುಟ್ಟುಹಾಕಿದೆ.ನಿರ್ದೇಶಕ ಎ.ಹರ್ಷ ಇಲ್ಲೂ ವಿಲನ್ ಪಾತ್ರಗಳನ್ನ ಅದ್ಭುತವಾಗಿ ಸೃಷ್ಟಿಸಿದ್ದಾರೆ. ಎಂದಿನಂತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಲ್ಲೂ ಅಭಿಮಾನಿಗಳ ದಿಲ್ ಕದ್ದಿದ್ದಾರೆ. ಇದೇ 29 ರಂದು ತೆರೆಗೆ ಬರ್ತಿರೋ ಈ ಚಿತ್ರದ 3 ನಿಮಿಷ 11 ಸೆಕೆಂಡ್ ಟ್ರೈಲರ್, ರೋಚಕತೆ ಮೂಡಿಸುತ್ತಿದೆ. ಚಿತ್ರದ ಅಷ್ಟು ಪಾತ್ರಗಳ ಪರಿಚಯ ಈ ಒಂದು ಟ್ರೈಲರ್ ನಲ್ಲಿಯೇ ಆಗಿದೆ.ನಟಿ ಶೃತಿಯಿಂದ ಹಿಡಿದು ಚಿತ್ರದ ೬ ಅಡಿ ವಿಲನ್ ಪಾತ್ರಧಾರಿಗಳ ಪಾತ್ರದ ಗತ್ತು ಇಲ್ಲಿ ಪರಿಚಯ ಆಗಿದೆ.ಚಿತ್ರದಲ್ಲಿ ಬಳಸಿದ ಗ್ರಾಫಿಕ್ಸ್ ಅದ್ಭುತ ಅನ್ನೊ ಅಭಿಪ್ರಾಯವೂ ಮೂಡುತ್ತದೆ. ಅರ್ಜುನ್ ಜನ್ಯ ಸಂಗೀತ ಯಾಕೋ ಈಗಲೇ ಅಷ್ಟಕಷ್ಟೇ ಅನಿಸುತ್ತಿದೆ. ಒಟ್ಟಾರೆ ಈಗ ಭಜರಂಗಿ-2 ಟ್ರೈಲರ್ ಧಮಾಕಾ ಮಾಡುತ್ತಿದೆ.
PublicNext
20/10/2021 08:19 pm