ಮುಂಬೈ:ಬಾಲಿವುಡ್ ನಾಯಕ ನಟ ವಿಕ್ಕಿ ಕೌಶಲ್ ತಮ್ಮ ಬೆನ್ನಿನ ಭಾಗದಲ್ಲಿ ಆಗಿರೋ ಗಾಯದ ಫೋಟೋ ಹಂಚಿಕೊಂಡು ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಅದನ್ನ ಯಾಕ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ್ರು ಅನ್ನೋದನ್ನ ಹೇಳುತ್ತವೇ. ಅದು ಅಸಲಿನಾ ? ಇಲ್ಲವೆ ನಕಲಿನಾ ಅದನ್ನೂ ಹೇಳ್ತೀವಿ ನೋಡಿ.
ವಿಕ್ಕಿ ಕೌಶಲ್ ಯಾರೂ ಅಂತ ಹೇಳೋದೇ ಬೇರೆ.ಸರ್ಜಿಕಲ್ ಸ್ಟ್ರೈಕ್ ಮೇಲೆ ಬಂದ ಉರಿ ಚಿತ್ರದ ಹೀರೋ ಈ ವಿಕ್ಕಿ ಕೌಶಲ್. ಸದ್ಯ ಸರ್ದಾರ್ ಉಧಮ್ ಚಿತ್ರವನ್ನ ಒಪ್ಪಿಕೊಂಡಿದ್ದಾರೆ. ಅದರ ಚಿತ್ರೀಕರಣದಲ್ಲೂ ತೊಡಗಿದ್ದಾರೆ. ಅದೇ ಚಿತ್ರದ ಒಂದು ದೃಶ್ಯದ ಫೋಟೋ ಈಗ ನೀವೇ ನೋಡಿರೋದು. ಇದು ರಿಯಲ್ ಅಲ್ಲ. ಮೇಕಪ್ ಕಲಾವಿದನ ಕೈಚಳಕದಲ್ಲಿ ಮೂಡಿದ ಕೃತಕ ಗಾಯ.ಈ ಕಲೆಯ ಕಲಾವಿದನ ಕೈಚಳಕವನ್ನ ಪ್ರಶಂಸಿಸಿದ ವಿಕ್ಕಿ, ತಮ್ಮ ಪೋಟೋ ಸಮೇತ ಪ್ರಾಸ್ಥೆಟಿಕ್ ಮೇಕಪ್ ಕಲಾವಿದ ಪೀಟರ್ ಗೋರ್ಶೆನಿನ್ ಹೆಸರನ್ನೂ ಸೋಷಿಯಲ್ ಮೀಡಿಯಾದಲ್ಲಿ ಬರೆದು ಹಾಕಿದ್ದಾರೆ.
PublicNext
19/10/2021 09:40 pm