ಎಚ್.ಡಿ.ಕೋಟೆ:ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಕಾರನ್ನ ಹಿಂಬಾಲಿಸಿಕೊಂಡು ಅತಿ ವೇಗದಲ್ಲಿ ಬರೋ ಅಭಿಮಾನಿಗಳನ್ನ, ತಮ್ಮ ಕಾರು ನಿಲ್ಲಿಸಿ ರೋಡ್ ಅಲ್ಲಿಯೇ ಬೈದು ಬುದ್ದಿ ಹೇಳುತ್ತಾರೆ.ಈಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಆ ಒಂದು ವೀಡಿಯೋನೇ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ದರ್ಶನ್ ಮೊನ್ನೆ ಎಚ್.ಡಿ.ಕೋಟೆಯ ರಸ್ತೆಯಲ್ಲಿ ಕೆಂಪು ಬಣ್ಣದ ಜೀಪ್ ಅಲ್ಲಿ ಕಾಣಿಸಿಕೊಂಡ್ರು. ಅದನ್ನ ಕಂಡ ಅಭಿಮಾನಿಗಳು ಸುಮ್ಮನೆ ಬಿಡ್ತಾರೆಯೇ. ದರ್ಶನ್ ಜೀಪ್ ಅನ್ನ ಫಾಲೋ ಮಾಡಿಯೇ ಬಿಟ್ಟರು. ಅದನ್ನ ಕಂಡ ದರ್ಶನ್, ಏ ರೋಡಲ್ಲಿ ಏನ್ ಆಟ ಆಡ್ತಾ ಇದ್ದೀರಾ? ಮೈಮೇಲೆ ಪ್ರಜ್ಞೆ ಬೇಡವಾ. ಮತ್ತೆ ಮತ್ತೆ ಬರ್ತಾ ಇದ್ದೀರಲ್ಲಾ,ಹೇಳಿದ್ರೂ ಕೇಳಲ್ವಾ ಅಂತ ಬುದ್ದಿ ಮಾತು ಹೇಳಿದ್ದಾರೆ. ಇದೇ ವೀಡಿಯೋ ಈಗ ಬೇಜಾನ್ ಸೌಂಡ್ ಮಾಡುತ್ತಿದೆ.
PublicNext
19/10/2021 04:27 pm