ಮುಂಬೈ: ರಾಜ್ ಕುಂದ್ರಾ ಮಡದಿ ಬಾಲಿವುಡ್ ನಟಿ, ಶಿಲ್ಪಾ ಶೆಟ್ಟಿ ಅವರು ನ್ಯೂ ಹೇರ್ ಸ್ಟೈಲ್ ನಿಂದ ಸದ್ಯ ಸುದ್ದಿಯಲ್ಲಿದ್ದಾರೆ.
ಶಿಲ್ಪಾ ಶೆಟ್ಟಿ ಅವರು ತಲೆಕೂದಲಿನ ಅಂಡರ್ ಕಟ್ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ನಟಿ ತಮ್ಮ ಹೇರ್ ಸ್ಟೈಲ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫಿಟ್ನೆಸ್ ವೀಡಿಯೋ ಜೊತೆಗೆ ನಟಿ ಶಿಲ್ಪಾ ಶೆಟ್ಟಿ ಅವರು ಹೊಸ ಹೇರ್ ಕಟ್ ಮಾಡಿಸಿಕೊಂಡ ವಿಷಯವನ್ನೂ ಹಂಚಿಕೊಂಡಿದ್ದಾರೆ. ನಟಿಯ ಹೇರ್ ಕಟ್ ನೋಡಿದ ಅಭಿಮಾನಿಗಳು ಕೆಲವರು ಮೆಚ್ಚಿಕೊಂಡಿದ್ದಾರೆ, ಇನ್ನು ಕೆಲವರು ಚೆನ್ನಾಗಿಲ್ಲ ಎಂದಿದ್ದಾರೆ.
ಶಿಲ್ಪಾ ಶೆಟ್ಟಿಯಂತಹ ನಟಿ ಈ ರೀತಿಯ ಹೇರ್ ಕಟ್ ಮಾಡಿಸಿಕೊಂಡಿರುವುದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ.
ಪತಿ ರಾಜ್ ಕುಂದ್ರಾ ಅವರಿಗೆ ಜಾಮೀನು ಸಿಗುವ ಮುನ್ನವೇ ರಿಯಾಲಿಟಿ ಡ್ಯಾನ್ಸ್ ಶೋಗೆ ಮರಳಿದ್ದ ಶಿಲ್ಪಾ ಶೆಟ್ಟಿ, ಮತ್ತೆ ತಮ್ಮ ಸಹಜ ಜೀವನಕ್ಕೆ ಮರಳಿದ್ದಾರೆ. ಫೋಟೋಶೂಟ್? ಹಾಗೂ ಹೊಸ ಪ್ರಾಜೆಕ್ಟಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಈ ಶಿಲ್ಪಾ ಶೆಟ್ಟಿಯ ಹೇರ್ ಸ್ಟೈಲ್ ವಿಚಾರವಾಗಿ ನೆಟ್ಟಿಗರು ಚರ್ಚಿಸುತ್ತಿದ್ದಾರೆ.
PublicNext
18/10/2021 08:16 pm