ವಾಷಿಂಗ್ಟನ್: ಅಮೆರಿಕ ಮಾಡೆಲ್, ವಿಶ್ವದ ಕಿರಿಯ ಬಿಲಿಯನೇರ್ ಕೈಲಿ ಜೆನ್ನರ್ ತನ್ನ ಮುಂಬರುವ ಮೇಕಪ್ ಸಂಗ್ರಹವನ್ನು ಉತ್ತೇಜಿಸಲು ನಕಲಿ ರಕ್ತದಲ್ಲಿ ಬೆತ್ತಲೆಯಾಗಿ ಪೋಸ್ ನೀಡಿದ್ದಾರೆ.
24ರ ಹರೆಯದ ಮಾಡೆಲ್ ಕೈಲಿ ಜೆನ್ನರ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಗರ್ಭಿಣಿಯಾಗಿರುವ ಕೈಲಿ ಜೆನ್ನರ್ ರಕ್ತದ ಮಡುವಿನಲ್ಲಿ ಬೆತ್ತಲಾಗಿ ಕುಳಿತ್ತಿದ್ದನ್ನು ಕಂಡು ಕೆಲ ಅಭಿಮಾನಿಗಳು ಕೊಂಚ ಶಾಕ್ ಆಗಿದ್ದಾರೆ.
ಕೈಲಿ ಜೆನ್ನರ್ ಫೋಟೋಗೆ ಕಮೆಂಟ್ ಮಾಡಿರುವ ಕೆಲ ನೆಟ್ಟಿಗರು, "ನೀವು ಗರ್ಭಿಣಿಯಾಗಿರುವುದರಿಂದ ಇದು ಒಂದು ರೀತಿಯ ಗೊಂದಲವನ್ನು ಉಂಟುಮಾಡುತ್ತದೆ" ಎಂದು ಹೇಳಿದ್ದಾರೆ. ಮತ್ತೆ ಕೆಲವರು "ಇದು ಒಳ್ಳೆಯ ಆಲೋಚನೆಯಲ್ಲ" ಎಂದು ಕಮೆಂಟ್ ಮಾಡಿದ್ದಾರೆ.
PublicNext
12/10/2021 10:30 pm