ವಾರಂಗಲ್: ಒಂದಿಲ್ಲೊಂದು ವಿವಾದಗಳಿಂದ ಸದಾ ಸುದ್ದಿಯಲ್ಲಿರುವ ಟಾಲಿವುಡ್ನ ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ.
ಹೌದು. ನವರಾತ್ರಿ ಸಂಭ್ರಮದಲ್ಲಿ ಇಡೀ ದೇಶವೇ ಇರುವ ಸಂದರ್ಭದಲ್ಲಿದೆ. ರಾಮ್ ಗೋಪಾಲ್ ವರ್ಮಾ ಅವರು ತೆಲಂಗಾಣದ ವಾರಂಗಲ್‌ನ ಮೈಸಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಆದರೆ ದೇವಿಯ ಮೂರ್ತಿಗೆ ವ್ಹಿಸ್ಕಿ ಕುಡಿಸುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.
ಈ ಸಂಬಂಧ ಖುದ್ದು ರಾಮ್ ಗೋಪಾಲ್ ವರ್ಮಾ ಫೋಟೋವನ್ನು ಟ್ವೀಟ್ ಮಾಡಿ, "ನಾನು ವೋಡ್ಕಾ ಕುಡಿಯುತ್ತೇನಾದರೂ ವಾರಂಗಲ್‌ನ ದೇವಿ ಮೈಸಮ್ಮಳಿಗೆ ವ್ಹಿಸ್ಕಿ ಕುಡಿಯುವಂತೆ ಮಾಡಿದೆ" ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮ್ತತೊಂದು ಟ್ವೀಟ್‌ನಲ್ಲಿ ಚಿಯರ್ಸ್ ಎಂದು ಬರೆದುಕೊಂಡಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರ ಟ್ವೀಟ್‌ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
PublicNext
12/10/2021 06:13 pm