ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಚ್ಚ ಸುದೀಪ್ ಪುತ್ಥಳಿ ನಿರ್ಮಿಸಿದ ರಾಯಚೂರಿನ ಫ್ಯಾನ್ಸ್

ಬೆಂಗಳೂರು: ಸೂಪರ್ ಸ್ಟಾರ್ ಸುದೀಪ್ ಅಭಿಮಾನಿಗಳು ಎಲ್ಲ ಅಭಿಮಾನಿಗಳಿಗಿಂತಲೂ ಕೊಂಚ ಡಿಫರಂಟ್ ಆಗಿದ್ದಾರೆ. ಕಿಚ್ಚನ ಪುತ್ಥಳಿಯನ್ನ ನಿರ್ಮಿಸೋ ಮೂಲಕ ತಮ್ಮ ಅಪಾರ ಅಭಿಮಾನವನ್ನ ಪ್ರದರ್ಶಿಸಿ ಈಗ ಪುತ್ಥಳಿ ಅನಾವರಣಕ್ಕೆ ಖುದ್ ಕಿಚ್ಚನನ್ನೆ ಆಹ್ವಾನಿಸಿದ್ದಾರೆ.

ಕನ್ನಡದ ಕಿಚ್ಚ ಎಲ್ಲರೂ ಇಷ್ಟಪಡೋ ಕ್ಲಾಸಿಕ್ ಕಲಾಕಾರ್. ಕರ್ನಾಟಕ ಸೇರಿದಂತೆ ಎಲ್ಲೆಡೆ ಕಿಚ್ಚನಿಗೆ ಅಭಿಮಾನಿಗಳಿದ್ದಾರೆ. ಆದರೆ ಯಾವ ಅಭಿಮಾನಿನೂ ಕಿಚ್ಚನ ಪುತ್ಥಳಿ ನಿರ್ಮಿಸಿ, ಅಭಿಮಾನ ತೋರುವ ಕೆಲಸ ಮಾಡಿರಲಿಲ್ಲ.ಆದರೆ ರಾಯಚೂರು ಜಿಲ್ಲೆಯ ಅಭಿಮಾನಿಗಳು ಸುದೀಪ್ ಪುತ್ಥಳಿ ನಿರ್ಮಿಸಿದ್ದಾರೆ. ಬೆಂಗಳೂರಿನ ಜೆಪಿ ನಗರದ ಸುದೀಪ್ ಮನೆಗೂ ತೆರಳಿ ಭೇಟಿಯಾಗಿದ್ದಾರೆ. ಪುತ್ಥಳಿ ಅನಾವರಣಕ್ಕೆ ಆಹ್ವಾನವನ್ನೂ ಕೊಟ್ಟಿದ್ದಾರೆ. ಅಭಿಮಾನಿಗಳ ಆಹ್ವಾನ ಸ್ವೀಕರಿಸಿರೋ ಸುದೀಪ್,ಪುತ್ಥಳಿ ನಿರ್ಮಿಸೋವಷ್ಟು ದೊಡ್ಡವನು ನಾನಲ್ಲ.ನಿಮ್ಮ ಪ್ರೀತಿಗೆ ನಾನು ಬರುವೆ ಅಂತಲೂ ಹೇಳಿ ಕಳಿಸಿದ್ದಾರೆ. ಇದನ್ನ ಕೇಳಿ ಅಭಿಮಾನಿಗಳು ಸಂತೋಷದಿಂದಲೇ ಸುದೀಪ್ ಮನೆಯಿಂದ ತೆರೆಳಿದ್ದಾರೆ.

Edited By :
PublicNext

PublicNext

11/10/2021 07:10 pm

Cinque Terre

103.36 K

Cinque Terre

2