ಹೈದರಾಬಾದ್: ಕನ್ನಡಿಗ ಪ್ರಕಾಶ್ ರಾಜ್ ಬಹು ಭಾಷೆ ನಟ. ಎಲ್ಲೆಡೆ ಬೇಡಿಕೆ ಇರೋ ಕಲಾವಿದ. ಅದಕ್ಕೂ ಹೆಚ್ಚಾಗಿ ನೇರಾ ನೇರವಾಗಿ ನುಡಿಯುವ ವ್ಯಕ್ತಿತ್ವದ ಮನುಷ್ಯ. ಇಂತಹ ವಿಶೇಷ ವ್ಯಕ್ತಿತ್ವದ ಪ್ರಕಾಶ್ ರೈ ಈಗ ಎಲೆಕ್ಷನ್ ನಿಂತಿದ್ದಾರೆ. ಅದು ಟಾಲಿವುಡ್ ನ ಮೂವೀ ಆರ್ಟಿಸ್ಟ್ ಅಸೋಸಿಯೇಷನ್ ಗೆ. ಇಲ್ಲಿ ಎಲ್ಲವೂ ಸರಿ ಇಲ್ಲ.ಯಾವುದೂ ಸರಿಯಾಗಿ ನಡೀತಿಲ್ಲ ಅಂತಲೇ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸಿದ್ದಾರೆ ಬಹು ಭಾಷಾ ನಟ
ಪ್ರಕಾಶ್ ರೈ.
ಪ್ರಕಾಶ್ ರೈ ಅವರ ಪ್ರತಿಸ್ಪರ್ಧಿಯಾಗಿ ನಟ ವಿಷ್ಣು ಮಂಚು ಕಣಕ್ಕಿಳಿದಿದ್ದಾರೆ. ಇವರಲ್ಲಿ ಯಾರು ಗೆಲ್ಲೋರು ಅನ್ನೋದೇ ಈಗೀನ ಕುತೂಹಲ. ಅಕ್ಟೋಬರ್-10 ಅಂದ್ರೆ ನಾಳೆ ಟಾಲಿವುಡ್ ಕಲಾವಿದರ ಸಂಘದ ಚುನಾವಣೆ ಇದೆ. ಪ್ರಕಾಶ್ ರೈ ಈ ಚುನಾವಣೆಗೆ ಸ್ಪರ್ಧಿಸಿರೋದ್ರಿಂದಲೇ ಈಗ ಸಂಘದ ಚುನಾವಣೆ ರಂಗೇರಿದೆ.ಪ್ರಕಾಶ್ ರೈ ಸಂಘದ ಚುನಾವಣೆ ಸ್ಪರ್ಧಿಸಲೇಬಾರದು ಅಂತ ವಿರೋಧಗಳೂ ವ್ಯಕ್ತವಾಗಿವೆ. ಆದರೆ ಪ್ರಕಾಶ್ ರೈ ಬೆಂಬಲಕ್ಕೆ ಕೆಲವು ನಟರು ನಿಂತಿರೋದ್ರಿಂದಲೇ ಈಗ ಪ್ರಕಾಶ್ ರೈ ಸ್ಪರ್ಧಿಸುತ್ತಿದ್ದಾರೆ. ನಾಳೆ ಹೊತ್ತಿಗೆ ಯಾರು ಅಧ್ಯಕ್ಷರು ಅನ್ನೋದು ತಿಳಿಯುತ್ತದೆ.
PublicNext
09/10/2021 07:06 pm