ಬೆಂಗಳೂರು: ಲೋರಿಯಲ್ ಪ್ಯಾರಿಸ್ ಬ್ರ್ಯಾಂಡ್ ರಾಯಭಾರಿ ಆಗಿರುವ ನಟಿ ಐಶ್ವರ್ಯ ರೈ ಬಚ್ಚನ್ ಪ್ಯಾರಿಸ್ ನಲ್ಲಿ ಲೋರಿಯಲ್ ಆಯೋಜಿಸಿದ್ದ 'ಪ್ಯಾರಿಸ್ ಫ್ಯಾಷನ್ ವೀಕ್'ನಲ್ಲಿ ಮಿಂಚಿದ್ದಾರೆ. ಸದ್ಯ ಪ್ಯಾರಿಸ್ ನಿಂದ ದುಬೈಗೆ ಹಾರಿರುವ ನಟಿ 'ದುಬೈ ಎಕ್ಸಪೋ'ದಲ್ಲಿ ಬ್ಯುಜಿಯಾಗಿದ್ದಾರೆ.
ಇನ್ನು 47ರ ನಟಿ ವಿಶೇಷ ಉಡುಗೆಯಲ್ಲಿ 'ಪ್ಯಾರಿಸ್ ಫ್ಯಾಷನ್ ವೀಕ್ಕಂಗೊಳಿಸಿದ ಫೋಟೋವೊಂದನ್ನಾ ಅವರ ಮೇಕಪ್ ಮ್ಯಾನ್ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕಪ್ಪು ಬಣ್ಣದ ಉಡುಗೆಯಲ್ಲಿ ನಟಿ ಸಕ್ಕತ್ತಾಗಿ ಮಿಂಚಿದ್ದಾರೆ. ದುಬೈ ಎಕ್ಸಪೋದಲ್ಲಿ ಮಾತನಾಡಿರುವ ಐಶ್ವರ್ಯ, 'ರಸ್ತೆಗಳಲ್ಲಿ ಇಂದಿಗೂ ಮಹಿಳೆಯರೂ ಸುರಕ್ಷಿತವಲ್ಲ. ಇದೇ ವಿಚಾರದ ಬಗ್ಗೆ ಪ್ಯಾರಿಸ್ ಫ್ಯಾಶನ್ ಶೋದಲ್ಲಿ ಜಾಗೃತಿ ಮೂಡಿಸಲಾಗಿತ್ತು. ಮಹಿಳೆಯರ ಸುರಕ್ಷತೆ ಬಗ್ಗೆ ಕಾಳಜಿ ವಹಿಸುವುದು ಇಂದಿನ ಅಗತ್ಯವಾಗಿದೆ' ಎಂದಿದ್ದಾರೆ.
PublicNext
06/10/2021 10:15 pm