ರಾಮನಗರ: ನಟಿ ಸೌಜನ್ಯಾ ಸಾವಿನ ಕೇಸ್‌ನ ಎಫ್ಐಆರ್ ದಾಖಲಾಗುತ್ತಲೇ ಪೊಲೀಸರು ತನಿಖೆ ಶುರು ಹಚ್ಚಕೊಂಡಿದ್ದಾರೆ. ಸೌಜನ್ಯಾ ಮೃತಪಟ್ಟ ಸ್ಥಳವಾದ ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡಬೆಲೆಯ ಸನ್ ವರ್ಥ್ ಅಪಾರ್ಟ್‌ಮೆಂಟ್‌ನ ಮನೆಗೆ ಕುಂಬಳಗೋಡು ಪೊಲೀಸರು ಆಗಮಿಸಿದ್ದಾರೆ. ಹಾಗೂ ಸ್ಥಳ ಮಹಜರು ನಡೆಸಿದ್ದಾರೆ.
ನಟಿಯ ಆಪ್ತ ಸಹಾಯಕ ಮಹೇಶ್ ಅವರನ್ನು ತಮ್ಮೊಂದಿಗೆ ಕರೆತಂದ ಪೊಲೀಸರು, ಅವರಿಂದ ವಿವರಣೆ ಪಡೆದರು. ನಟಿಯ ತಂದೆ ಪ್ರಭು ಮಾದಪ್ಪ ಸಹ ಈ ಸಂದರ್ಭ ಹಾಜರಿದ್ದರು.
PublicNext
01/10/2021 01:48 pm