ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗನೊಂದಿಗೆ ನಿಖಿಲ್ ಕುಮಾರಸ್ವಾಮಿ ಫಸ್ಟ್ ಲುಕ್ ರಿವೀಲ್

ನಟ ನಿಖಿಲ್, ರೇವತಿ ದಂಪತಿಗೆ ಗಂಡು ಮಗು ಜನಿಸಿದ್ದು ಗೌಡ್ರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರೇವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

2020ರ ಏಪ್ರಿಲ್ ನಲ್ಲಿ ರೇವತಿ ಜೊತೆ ನಿಖಿಲ್ ಕುಮಾರಸ್ವಾಮಿ ಸಪ್ತಪದಿ ತುಳಿದಿದ್ದರು. ರೇವತಿ ಪ್ರೆಗ್ನೆಂಟ್ ಎಂಬ ಸುದ್ದಿ ಇತ್ತೀಚಿನ ಕೆಲವು ತಿಂಗಳುಗಳಿಂದ ಕೇಳಿಬರುತ್ತಿತ್ತು. ಈ ವರ್ಷ ಜೂನ್ ನಲ್ಲಿ ಆ ಬಗ್ಗೆ ಸ್ವತಃ ನಿಖಿಲ್ ಪ್ರತಿಕ್ರಿಯೆ ನೀಡಿದ್ದರು.

ಇತ್ತೀಚೆಗಷ್ಟೆ ನಿಖಿಲ್ ಶೀಘ್ರದಲ್ಲಿ ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಬರಲಿದ್ದಾರೆ’ ಎಂದು ಹೇಳಿದ್ದರು. ಈಗ ಅವರಿಗೆ ಗಂಡು ಮಗು ಜನನವಾಗಿದೆ.

ಇನ್ನು ಮಗನೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ನಿಖಿಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

24/09/2021 02:37 pm

Cinque Terre

49.5 K

Cinque Terre

6