ಬೆಂಗಳೂರು: ಚಿರಂಜೀವಿ ಸರ್ಜಾ-ಮೇಘನಾ ರಾಜ್ ಪುತ್ರ ರಾಯನ್ ರಾಜ್ ತನ್ನ ಪ್ರಥಮ ಜನ್ಮದಿನದ ನಿರೀಕ್ಷೆಯಲ್ಲಿದ್ದಾನೆ. ಈಗಾಗಲೇ ಆತನಿಗೆ 11 ತಿಂಗಳು. ಮೊದಲ ಬರ್ತ್‌ಡೇ ಆಚರಿಸಲು ಒಂದು ತಿಂಗಳಷ್ಟೇ ಬಾಕಿ. ರಾಯನ್ ಇಷ್ಟು ಬೇಗ ಬೆಳೆಯುತ್ತಿದ್ದಾನಾ, ಆಗಲೇ 11 ತಿಂಗಳು ಆಗೋಯ್ತಾ ಎಂದು ಮೇಘನಾ ರಾಜ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ರಾಯನ್ ಆಟವಾಡುತ್ತಿರುವ ಕ್ಯೂಟ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ವೀಡಿಯೋದಲ್ಲಿ ಯಲ್ಲೋ ಟಿಶರ್ಟ್ ಹಾಕಿರುವ ರಾಯನ್, ಗೊಂಬೆ ಜೊತೆ ಆಟವಾಡುತ್ತಿದ್ದಾನೆ. ಈ ವೇಳೆ ಯಾರದು ನಿನ್ನ ತರಾನೆ ಇದಾರೆ ಎಂದು ಮೇಘನಾ ಕೇಳಿದ್ದಾರೆ. ಆಗ ರಾಯನ್ ಕೂಗಾಡಿ, ನಕ್ಕಿದ್ದಾನೆ.
PublicNext
23/09/2021 07:40 pm