ಫಿಟ್ ಆಗಿ ಕಾಣಬೇಕು ಎನ್ನುವುದು ಪ್ರತಿಯೊಬ್ಬರ ಆಸೆ. ಅದರಲ್ಲೂ ನಟಿ ನಟಿಯರು ತುಸು ಜಾಸ್ತಿಯೇ ಈ ಫಿಟ್ನೆಸ್ ಗೆ ಆದ್ಯತೆ ನೀಡುತ್ತಾರೆ. ಪ್ರತಿದಿನ ಜಿಮ್ ಗೆ ಹೋಗಿ ಕಠಿಣವಾದ ತಾಲೀಮು ನಡೆಸುತ್ತಾರೆ. ಅದೇ ರೀತಿ ಕತ್ರಿನಾ ಕೈಫ್ ಕೂಡಾ ವ್ಯಾಯಾಮದ ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ತರಬೇತುದಾರ ಸೂಚಿಸುವಂತಹ ತಾಲಿಮನ್ನು ಚಾಚು ತಪ್ಪದೆ ಮಾಡುತ್ತಾರೆ. ಇತ್ತೀಚೆಗೆ, ಅವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಒಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ವೀಡಿಯೋದಲ್ಲಿ ಅವರು ಜಿಮ್ ನಲ್ಲಿ ವಿವಿಧ ಉಪಕರಣಗಳೊಂದಿಗೆ ಕಠಿಣವಾದ ತಾಲೀಮು ನಡೆಸುತ್ತಿರುವುದನ್ನು ನಾವು ಕಾಣಬಹುದಾಗಿದೆ.
“ನಾನು ನನ್ನ ಮನಸ್ಸಿಗೆ ತರಬೇತಿ ನೀಡುತ್ತೇನೆ.. ನನ್ನ ದೇಹವು ಅದನ್ನು ಅನುಸರಿಸುತ್ತದೆ. ಕೆಲವೊಮ್ಮೆ ಅನುಸರಿಸದೆ ಇದ್ದಾಗ ಪ್ರಸಿದ್ಧ ಫಿಟ್ನೆಸ್ ತರಬೇತುದಾರರಾದಂತಹ ರೆಜಾ ಕತಾನಿ ಅವರ ಬಳಿ ಸಲಹೆಯನ್ನು ತೆಗೆದು ಕೊಳ್ಳುತ್ತೇನೆ” ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
PublicNext
18/09/2021 04:24 pm