ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಉಪ್ಪಿಯ ಬರ್ತಡೇ ಡೈರೆಕ್ಷನ್ ಸಿನಿಮಾ ಘೋಷಣೆ ಮಾಡಬಹುದು ಅಥವಾ ಪೋಸ್ಟರ್ ಏನಾದರೂ ರಿಲೀಸ್ ಮಾಡಬಹುದು ಎಂಬ ಕುತೂಹಲ ಹುಟ್ಟಿಕೊಂಡಿದೆ. ಎಲ್ಲರ ದೃಷ್ಟಿ ಉಪ್ಪಿ ಡೈರೆಕ್ಷನ್ ಚಿತ್ರದ ಕಡೆ ಇರುವಾಗಲೇ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಭರ್ಜರಿ ಸುದ್ದಿ ನೀಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಜೊತೆ ರಾಮ್ ಗೋಪಾಲ್ ವರ್ಮಾ ಸಿನಿಮಾ ಘೋಷಿಸಿದ್ದಾರೆ. ಉಪೇಂದ್ರ ಜೊತೆ ನಾನು ಆಕ್ಷನ್ ಚಿತ್ರ ಮಾಡುತ್ತಿದ್ದೇನೆ, ಶೀಘ್ರದಲ್ಲೇ ಈ ಪ್ರಾಜೆಕ್ಟ್ ಶುರು ಮಾಡ್ತೇವೆ ಎಂದು ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ. ಇದೇ ವೇಳೆ ಉಪೇಂದ್ರ ಅವರ ಬರ್ತಡೇಗೆ ಶುಭಕೋರಿದ್ದಾರೆ.
PublicNext
18/09/2021 03:33 pm